Saturday, 14th December 2024

ಎಫ್ -35 ಫೈಟರ್ ಜೆಟ್‌ ಪತನ

ಅಮೆರಿಕ: ನ್ಯೂ ಮೆಕ್ಸಿಕೋದ ಅಲ್ಬುಕರ್ಕ್‌ನಲ್ಲಿ ಎಫ್ -35 ಫೈಟರ್ ಜೆಟ್‌ ಪತನಗೊಂಡಿದೆ. ಜೆಟ್ ನಲ್ಲಿದ್ದ ಪೈಲಟ್‌ಗೆ ಗಂಭೀರ ಗಾಯಗಳಾಗಿವೆ. ಪತನವಾದ ಯುದ್ಧ ವಿಮಾನವು $135 ಮಿಲಿಯನ್ ಮೌಲ್ಯ ದ್ದಾಗಿದೆ.

ವಿಮಾನ ಅಲ್ಬುಕರ್ಕ್‌ನಿಂದ 1,100 ಕಿಲೋಮೀಟರ್ ದೂರದಲ್ಲಿರುವ ದಕ್ಷಿಣ ಕ್ಯಾಲಿಫೋರ್ನಿಯಾದ ಎಡ್ವರ್ಡ್ಸ್ ಏರ್ ಫೋರ್ಸ್ ಬೇಸ್‌ಗೆ ತೆರಳುತ್ತಿತ್ತು.

ಕಿರ್ಟ್ಲ್ಯಾಂಡ್ ಏರ್ ಫೋರ್ಸ್ ಬೇಸ್ ನಲ್ಲಿ ಇಂಧನ ತುಂಬಿದ ನಂತರ ಸ್ಥಳೀಯ ಸಮಯ ಮಧ್ಯಾಹ್ನ 1:50 ರ ಸುಮಾರಿಗೆ ಅಪಘಾತ ಸಂಭವಿಸಿದೆ.

ಅಲ್ಬುಕರ್ಕ್ ಫೈರ್ ಪಾರುಗಾಣಿಕಾ ವಕ್ತಾರರಾದ ಲೆಫ್ಟಿನೆಂಟ್ ಜೇಸನ್ ಫೆಜರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದು, ಅನೇಕ ಏಜೆನ್ಸಿಗಳು ಅಪಘಾತಕ್ಕೆ ತ್ವರಿತವಾಗಿ ಪ್ರತಿಕ್ರಿಯಿಸಿವೆ ಎಂದು ಉಲ್ಲೇಖಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳ ವೀಡಿಯೊದಲ್ಲಿ ರಸ್ತೆಯ ಪಕ್ಕದ ಮೈದಾನದಲ್ಲಿ ವಿಮಾನವು ಹೊತ್ತಿ ಉರಿಯುತ್ತಿದೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ಯಶಸ್ವಿಯಾಗಿ ನಿಯಂತ್ರಿಸಲು ಸಾಧ್ಯವಾಗಿದೆ.

ಫೈಟರ್ ಜೆಟ್ ಅಲ್ಬುಕರ್ಕ್‌ನ ಇಂಟರ್ನ್ಯಾಷನಲ್ ಸನ್‌ಪೋರ್ಟ್ ಬಳಿ ಅಪಘಾತಕ್ಕೀಡಾಯಿತು. ಪೈಲಟ್ ಪ್ರಜ್ಞೆ ಕಳೆದುಕೊಂಡಿದ್ದು ಅವರನ್ನು ತ್ವರಿತವಾಗಿ ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯ ಆಸ್ಪತ್ರೆಗೆ ಸಾಗಿಸಲಾಯಿತು.