Friday, 13th December 2024

ಢಾಕಾ: ಆರು ಅಂತಸ್ತಿನ ಜ್ಯೂಸ್ ಕಾರ್ಖಾನೆಯಲ್ಲಿ ಭಾರಿ ಅಗ್ನಿ ದುರಂತ, 40 ಸಾವು

ಢಾಕಾ:‌ ಬಾಂಗ್ಲಾದೇಶದ ರಾಜಧಾನಿ ಢಾಕಾ ಹೊರಗಿರುವ ಆರು ಅಂತಸ್ತಿನ ಜ್ಯೂಸ್ ಕಾರ್ಖಾನೆಯಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿ, ಕನಿಷ್ಠ 40 ಜನರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳು ಇರುವ ಕಾರಣ ಕಟ್ಟಡದ ನೆಲಮಹಡಿಯಿಂದ ಬೆಂಕಿ ಕಾಣಿಸಿಕೊಂಡು ಹರಡಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಹಲವಾರು ಕಾರ್ಮಿಕರು ಕಟ್ಟಡ ದಿಂದ ಜಿಗಿದಿದ್ದಾರೆ. ಹಶೆಮ್ ಫುಡ್ಸ್ ಲಿಮಿಟೆಡ್ʼನ ಕಾರ್ಖಾನೆ ಕಟ್ಟಡದಲ್ಲಿ 18 ಅಗ್ನಿಶಾಮಕ ಘಟಕಗಳು ಬೆಂಕಿಯನ್ನ ನಂದಿಸಲು ಹೆಣಗಾಡುತ್ತಿದ್ದಾರೆ.

ಕಾಣೆಯಾದ ಅನೇಕರಲ್ಲಿ ಕಾಣೆಯಾದ 44 ಕಾರ್ಮಿಕರ ಗುರುತುಗಳನ್ನ ದೃಢಪಡಿಸಲಾಗಿದೆ. ಈ ಸಂದರ್ಭದಲ್ಲಿ ಮುಂಭಾಗದ ಗೇಟ್ ಮತ್ತು ಕಾರ್ಖಾನೆಯ ನಿರ್ಗಮನ ಗೇಟ್‌ ಲಾಕ್ ಆಗಿದೆ ಎಂದು ರಕ್ಷಿಸಲ್ಪಟ್ಟ ಕಾರ್ಮಿಕರು ಮತ್ತು ಸಂಬಂಧಿಕರು ಆರೋಪಿಸಿದ್ದಾರೆ. ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ಕ್ರಮಗಳಿಲ್ಲ ಎಂದು ತಿಳಿದು ಬಂದಿದೆ.