Sunday, 8th September 2024

ಅಮೆರಿಕದಲ್ಲಿ ಮೊದಲ ಒಮಿಕ್ರೋನ್ ಪ್ರಕರಣ ಪತ್ತೆ

ವಾಷಿಂಗ್ಟನ್: ಅಮೆರಿಕದಲ್ಲಿ ಮೊದಲ ಒಮಿಕ್ರೋನ್ ಪ್ರಕರಣ ಪತ್ತೆಯಾಗಿದೆ, ಹೀಗಾಗಿ, ಪ್ರತಿಯೊಬ್ಬ ನಾಗರಿಕನೂ ಲಸಿಕೆ ಪಡೆಯುವಂತೆ ವೈಟ್‌ಹೌಸ್ ಮನವಿ ಮಾಡಿದೆ.

ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ರೂಪಾಂತರಿ ‘ಒಮಿಕ್ರೋನ್’ ಅಮೆರಿಕಾದಲ್ಲೂ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ ವ್ಯಕ್ತಿಯಲ್ಲಿ ಒಮಿಕ್ರೋನ್ ಪತ್ತೆಯಾಗಿದೆ ಎಂದು ಅಮೆರಿಕಾ ದೃಢಪಡಿಸಿದೆ.

ಕ್ಯಾಲಿಫೋರ್ನಿಯಾದಲ್ಲಿರುವ ವ್ಯಕ್ತಿಯಲ್ಲಿ ಹೊಸ ರೂಪಾಂತರಿ ಕಂಡುಬಂದಿದೆ. ಸೋಂಕಿತ ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದಾರೆ. ಸೋಂಕಿತ ನ.22 ರಂದು ದಕ್ಷಿಣ ಆಫ್ರಿಕಾದಿಂದ ಬಂದಿದ್ದು, ನ.19 ರಂದು ಕೋವಿಡ್ ಪಾಸಿಟಿವ್ ಕಂಡು ಬಂದಿತ್ತು. ಸೋಂಕಿತ ಸ್ವಯಂ ಕ್ವಾರಂಟೈನ್ ಆಗಿದ್ದಾರೆ.  ಕರೋನಾ ಹೊಸ ರೂಪಾಂತರ ಒಮಿಕ್ರೋನ್, ಬ್ರಿಟನ್, ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ 13 ದೇಶಗಳನ್ನು ತಲುಪಿದ್ದು ಭೀತಿ ಸೃಷ್ಟಿಸಿದೆ.

ಒಮಿಕ್ರೋನ್ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ದೇಶಗಳು ಪ್ರಯಾಣ ನಿರ್ಬಂಧವನ್ನು ಜಾರಿಗೆ ತಂದಿವೆ.

ಒಮಿಕ್ರೋನ್‌ಗೆ ಪ್ರತ್ಯೇಕ ಲಸಿಕೆ ಅಗತ್ಯಬಿದ್ದರೆ, ಅದು ಕೆಲವೇ ವಾರಗಳಲ್ಲಿ ಸಿದ್ಧವಾಗಲಿದ್ದು, ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಒಮಿಕ್ರೋನ್​ ರೂಪಾಂತರಿಯು ಕೊರೊನಾದ ಈ ಹಿಂದಿನ ಪ್ರಭೇದಗಳಿಗಿಂತಲೂ ಹೆಚ್ಚು ಅಪಾಯಕಾರಿ. ಮತ್ತಷ್ಟು ಪರೀಕ್ಷಾ ಫಲಿತಾಂಶಗಳು ಇಲ್ಲದೆ ಈ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ.

error: Content is protected !!