Wednesday, 9th October 2024

24 ಭಾರತೀಯ ಮೀನುಗಾರರ ಬಂಧನ

ಕೊಲಂಬೊ: ಶ್ರೀಲಂಕಾದ ನೌಕಾಪಡೆಯು 24 ಭಾರತೀಯ ಮೀನುಗಾರರನ್ನು ಬಂಧಿಸಿದೆ ಮತ್ತು ಅವರ ಐದು ಟ್ರಾಲರ್ಗಳನ್ನು ವಶಪಡಿಸಿಕೊಂಡಿದೆ ಎಂದು ಮಂಗಳವಾರ ಹೇಳಿಕೆ ತಿಳಿಸಿದೆ.
ನೌಕಾಪಡೆ ಮತ್ತು ಶ್ರೀಲಂಕಾ ಕೋಸ್ಟ್ ಗಾರ್ಡ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉತ್ತರ ಜಾಫ್ನಾ ಪರ್ಯಾಯ ದ್ವೀಪದ ಕರೈನಗರದ ಕರಾವಳಿಯಲ್ಲಿ ಮೀನುಗಾರರನ್ನು ಬಂಧಿಸಲಾಗಿದೆ. ನಂತರ ಅವರನ್ನು ಕಂಕಸಂತುರೈ ಬಂದರಿಗೆ ಕರೆತಂದು ಮುಂದಿನ ಕ್ರಮಕ್ಕಾಗಿ ಮೀನುಗಾರಿಕೆ ನಿರೀಕ್ಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಶ್ರೀಲಂಕಾದ ಸಮುದ್ರದಲ್ಲಿ ಮೀನುಗಾರಿಕೆ ಮಾಡಿದ್ದಕ್ಕಾಗಿ ಈ ವರ್ಷ ಒಟ್ಟು 252 ಭಾರ ತೀಯ ಮೀನುಗಾರರನ್ನು ಬಂಧಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ. ಪಾಕ್ ಜಲಸಂಧಿ ಯು ತಮಿಳುನಾಡನ್ನು ಶ್ರೀಲಂಕಾದಿಂದ ಬೇರ್ಪಡಿಸುವ ನೀರಿನ ಕಿರಿದಾದ ಸಂಧಿಯಾ ಗಿದ್ದು, ಎರಡೂ ದೇಶಗಳ ಮೀನುಗಾರರಿಗೆ ಶ್ರೀಮಂತ ಮೀನುಗಾರಿಕಾ ಕೇಂದ್ರವಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ ಕೇಂದ್ರಕ್ಕೆ ಮಾಹಿತಿ ನೀಡಿದ್ದು, ನೆರೆಯ ದೇಶದಿಂದ ಮೀನು ಗಾರರು ಮತ್ತು ಅವರ ದೋಣಿಗಳನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.