Sunday, 15th December 2024

ಶಾಪಿಂಗ್ ಸೆಂಟರ್ ಒಳಗಡೆ ಚಾಕುವಿನಿಂದ ಇರಿತ: ಐವರಿಗೆ ಗಾಯ

ಮಿಲನ್: ದಕ್ಷಿಣ ಇಟಲಿಯ ಮಿಲನ್ ನಗರದಲ್ಲಿ ಶಾಪಿಂಗ್ ಸೆಂಟರ್ ಒಳಗಡೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಐದು ಮಂದಿಯನ್ನು ಗಾಯಗೊಳಿಸಿದ್ದು, ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಈ ಸಂಬಂಧ ಪೊಲೀಸರು 46 ವರ್ಷ ವಯಸ್ಸಿನ ಇಟಲಿ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸೂಪರ್ ಮಾರ್ಕೆಟ್ ಉದ್ಯೋಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿದ್ದಾರೆ. ಗಾಯಗೊಂಡವರಲ್ಲಿ ಸ್ಪೇನ್‍ನ ಫುಟ್ಬಾಲ್ ಆಟಗಾರ ಪಾಬ್ಲೊ ಮರಿ ಸೇರಿದ್ದಾರೆ.