Friday, 22nd November 2024

ಮಾನವ ಕಳ್ಳಸಾಗಣೆ ಆರೋಪ: ಫ್ರಾನ್ಸಿನಲ್ಲಿ ವಿಮಾನ ವಶಕ್ಕೆ

ಫ್ರಾನ್ಸ್: ಭಾರತೀಯ ಪ್ರಯಾಣಿಕರನ್ನು (300 ಕ್ಕೂ ಹೆಚ್ಚು)ಹೊತ್ತ ನಿಕರಾಗುವಾಗೆ ತೆರಳುತ್ತಿದ್ದ ವಿಮಾನವನ್ನು ಮಾನವ ಕಳ್ಳಸಾಗಣೆ ಆರೋಪದ ಮೇಲೆ ಫ್ರಾನ್ಸ್ನಲ್ಲಿ ವಶಕ್ಕೆ ಪಡೆಯಲಾಗಿದೆ.

ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯ ಬಗ್ಗೆ ತನಿಖೆ ನಡೆಸುತ್ತಿದೆ. ದುಬೈನಿಂದ ನಿಕರಾಗುವಾಗೆ ತೆರಳುತ್ತಿದ್ದ 303 ಜನರನ್ನು ಫ್ರೆಂಚ್ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ನಿಲುಗಡೆಯಲ್ಲಿ ಬಂಧಿಸಲಾಗಿದೆ ಎಂದು ಫ್ರೆಂಚ್ ಅಧಿಕಾರಿಗಳು ಮಾಹಿತಿ ನೀಡಿದರು. ರಾಯಭಾರ ಕಚೇರಿ ತಂಡವು ಕಾನ್ಸುಲರ್ ಪ್ರವೇಶವನ್ನು ಪಡೆದುಕೊಂಡಿದೆ. ನಾವು ಪರಿಸ್ಥಿತಿಯನ್ನು ತನಿಖೆ ಮಾಡುತ್ತಿದ್ದೇವೆ, ಪ್ರಯಾಣಿಕರ ಯೋಗಕ್ಷೇಮವನ್ನು ಖಚಿತ ಪಡಿಸುತ್ತಿದ್ದೇವೆ” ಎಂದು ಅದು ಎಕ್ಸ್ ನಲ್ಲಿ ಹೇಳಿದೆ.

303 ಭಾರತೀಯ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು ಅನಾಮಧೇಯ ಮಾಹಿತಿಯ ನಂತರ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪ್ಯಾರಿಸ್ ಪ್ರಾಸಿಕ್ಯೂಟರುಗಳು ತಿಳಿಸಿದ್ದಾರೆ. ವಿಮಾನವು ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಹೊರಟಿತ್ತು. ಮಾನವ ಕಳ್ಳಸಾಗಣೆ ಶಂಕೆಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.