Saturday, 14th December 2024

ಪೂರ್ವ ಇಂಡೊನೇಷ್ಯಾದಲ್ಲಿ ಪ್ರವಾಹ, ಭೂಕುಸಿತ: ಮೃತರ ಸಂಖ್ಯೆ 126

ಲೆಂಬಾಟಾ, ಇಂಡೊನೇಷ್ಯಾ: ಪೂರ್ವ ಇಂಡೊನೇಷ್ಯಾದಲ್ಲಿ ಸಂಭವಿಸಿದ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಮೃತರ ಸಂಖ್ಯೆ 126ಕ್ಕೆ ಏರಿದೆ.

ಹಲವಾರು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹದಿಂದಾಗಿ ಇಂಡೊನೇಷ್ಯಾದ ಫ್ಲೋರ್ಸ್‌ ದ್ವೀಪದಿಂದ ಪೂರ್ವ ಟಿಮೋರ್‌ವರೆಗೆ ವ್ಯಾಪಿಸಿರುವ ದ್ವೀಪಗಳಲ್ಲಿ ತೀವ್ರ ಹಾನಿ ಯಾಗಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.

ಈ ವರೆಗೆ 67 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 6 ಜನರು ನಾಪತ್ತೆ ಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily