ಮಾಪುಟೊ: ಉತ್ತರ ಮೊಜಾಂಬಿಕ್ನ ಕ್ಯಾಬೊ ಡೆಲ್ಗಾಡೊ ಪ್ರಾಂತ್ಯದ ಹಲವಾರು ಹಳ್ಳಿಗಳ ನಿವಾಸಿಗಳ ಮೇಲೆ ದಾಳಿ ನಡೆಸಿ ರುವ ಇಸ್ಲಾಮಿಕ್ ಸ್ಟೇಟ್ ನಂಟಿನ ಉಗ್ರರು 50 ಕ್ಕೂ ಅಧಿಕ ಗ್ರಾಮಸ್ಥರ ಶಿರಚ್ಛೇದ ಮಾಡಿದ್ದಾರೆ ಎಂದು ವರದಿಯಾಗಿದೆ.
ಉಗ್ರರು ಗ್ರಾಮಸ್ಥರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಭೀತಿಗೊಂಡ ಗ್ರಾಮಸ್ಥರು ಕಾಡಿಗೆ ಓಡಿಹೋದರೂ ಬಿಡದೆ ಉಗ್ರರು ಕ್ರೌರ್ಯ ಮೆರೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉಗ್ರರು ಹಳ್ಳಿಯೊಂದರ ನಿವಾಸಿಗಳನ್ನು ಕೊಲೆ ಮಾಡುವ ಮುನ್ನ, ಫುಟ್ಬಾಲ್ ಪಿಚ್ ನಲ್ಲಿ ಓಡಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.