ಪ್ಯಾರಿಸ್: ನಹೆಲ್ ಎಂಬ ಬಾಲಕನನ್ನು ಪೊಲೀಸ್ ಅಧಿಕಾರಿಯೊಬ್ಬರು ಗುಂಡಿಕ್ಕಿ ಕೊಂದ ನಂತರ ಫ್ರಾನ್ಸ್‌ನಾದ್ಯಂತ ಪ್ರಾರಂಭ ವಾದ ಗಲಭೆ ಮುಂದುವರೆದಿದೆ.
ಭಾನುವಾರ ಪೊಲೀಸರೊಂದಿಗೆ ಘರ್ಷಣೆಗಿಳಿದ ಗಲಭೆಕೋರರು, ಮಧ್ಯರಾತ್ರಿ ಪ್ಯಾರಿಸ್‌ನ ದಕ್ಷಿಣ ವಿಭಾಗದ ಮೇಯರ್ ಮೆನೆಗೆ ಕಾರು ನುಗ್ಗಿಸಿದರು. ಘಟನೆಯಲ್ಲಿ ಮೇಯರ್ ಪತ್ನಿ ಹಾಗೂ ಓರ್ವ ಮಗ ಗಾಯಗೊಂಡಿದ್ದಾರೆ.
ಪ್ಯಾರಿಸ್‌ನ ಉಪನಗರ ಎಲ್ ‘ಹೇ-ಲೆಸ್-ರೋಸಸ್‌ನಲ್ಲಿರುವ ಮೇಯರ್ ವಿನ್ಸೆಂಟ್ ಜೀನ್ ಬ್ರುನ್ ಅವರ ಮನೆಗೆ ಕಾರು ನುಗ್ಗಿಸಿ ಬೆಂಕಿ ಹಚ್ಚಲಾಗಿದೆ.
ನಿದ್ರೆಯಲ್ಲಿದ್ದ ಪತ್ನಿ ಮತ್ತು ಓರ್ವ ಮಗನಿಗೆ ಗಾಯಗಳಾಗಿವೆ. ನಾನು ಟೌನ್ಹಾಲ್ನಲ್ಲಿ ಹಿಂಸಾಚಾರ ಪ್ರತಿಭಟನೆ ಬಗ್ಗೆ ವಿಚಾರಣೆ ನಡೆಸುತ್ತಿದ್ದೆ. ದಾಳಿ ಭಯಾನಕ ಮತ್ತು ಅವಮಾನಕರವಾಗಿದ್ದು, ಇದೀಗ ಹೊಸ ರೂಪ ಪಡೆದುಕೊಂಡಿದೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಹೆಲ್ನ ಅಜ್ಜಿ, ಹಿಂಸಾಚಾರದ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ಭಾನುವಾರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಆದರೂ ಪ್ರತಿಭಟನೆಗಳು ಮುಂದುವರೆದಿವೆ.
ಗಲಭೆ ಆರಂಭವಾದ ಸಂದರ್ಭದಲ್ಲಿ ಒಟ್ಟು 719 ಜನರನ್ನು ಪೊಲೀಸರು ಬಂಧಿಸಿದ್ದರು. ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿ ಸಿದ ಬಳಿಕ ಬಂಧಿತರ ಸಂಖ್ಯೆ 3,000ಕ್ಕೆ ತಲುಪಿದೆ.