Sunday, 1st December 2024

ವಿಶ್ವದ ಅತಿ ಹಿರಿಯ ವ್ಯಕ್ತಿ ಫ್ರೆಂಚ್ ನನ್ ವಿಧಿವಶ

ಫ್ರಾನ್ಸ್ಜ: ವಿಶ್ವದ ಅತಿ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ 118 ವರ್ಷದ ಫ್ರೆಂಚ್ ನನ್ ವಿಧಿವಶರಾಗಿದ್ದಾರೆ.

ಸಿಸ್ಟರ್ ಆಂಡ್ರೆ ಎಂಬ ಹೆಸರಿನಿಂದಲೂ ಪ್ರಖ್ಯಾತರಾಗಿದ್ದರು. ದಕ್ಷಿಣ ಫ್ರಾನ್ಸ್ ನಲ್ಲಿ ಫೆಬ್ರವರಿ 11, 1904 ರಲ್ಲಿ ಜನಿಸಿದ್ದ ಇವರು ಎರಡು ವಿಶ್ವ ಯುದ್ಧಗಳಿಗೂ ಸಾಕ್ಷಿಯಾಗಿ ದ್ದರು.

ಕಳೆದ ರಾತ್ರಿ ಮಲಗಿದ್ದ ಸ್ಥಳದಲ್ಲಿಯೇ ಅವರು ನಿಧನರಾಗಿದ್ದಾರೆ.

ಈ ಮೊದಲು ಜಪಾನಿನ ಕನೆ ತನಕಾ ವಿಶ್ವದ ಅತಿ ಹಿರಿಯ ವ್ಯಕ್ತಿ ಎಂದು ಗುರುತಿಸ ಲಾಗಿತ್ತು. ಹೀಗಾಗಿ ಸಿಸ್ಟರ್ ಆಂಡ್ರೆ ಅವರನ್ನು ಯುರೋಪಿನ ಅತಿ ಹಿರಿಯ ವ್ಯಕ್ತಿ ಎಂದು ಕರೆಯಲಾಗುತ್ತಿತ್ತು.

119 ವರ್ಷದ ತನಕಾ ಕಳೆದ ವರ್ಷ ವಿಧಿವಶರಾದ ಬಳಿಕ ಸಿಸ್ಟರ್ ಆಂಡ್ರೆ ಜಗತ್ತಿನ ಅತಿ ಹಿರಿಯ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದರು.

Read E-Paper click here