ಮಂಗಳವಾರ ಪೆಟ್ರೋಲ್ ಲೀಟರ್ಗೆ 24.3 ರೂ. ಹಾಗೂ ಡೀಸೆಲ್ ಬೆಲೆಯಲ್ಲಿ 38.4 ರೂ. ಏರಿಕೆಯಾಗಿದೆ. ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ 420 ರೂ. ಆಗಿದ್ದು, ಡೀಸೆಲ್ 400 ರೂ. ಆಗಿದೆ.
ಇಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿದ್ದೇವೆ ಎಂದು ಸಂಪುಟ ಸಭೆ ಬಳಿಕ ಇಂಧನ ಸಚಿವ ಕಂಚಾನ ವಿಜೆಶೇಖರ ಟ್ವೀಟ್ ಮೂಲಕ ತಿಳಿಸಿದ್ದಾರೆ. ದೇಶದಲ್ಲಿ ಆರ್ಥಿಕ ಸ್ಥಿತಿ ಕುಸಿದಿರುವುದರಿಂದ ಹಾಗೂ ತೈಲ ಪೂರೈಕೆ ಇಲ್ಲದಿರುವು ದರಿಂದ, ಬೇರೆ ದಾರಿ ಇಲ್ಲದೇ ಬೆಲೆ ಏರಿಕೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಶ್ರೀಲಂಕಾದಲ್ಲಿ ಈ ಬಿಕ್ಕಟ್ಟು ಉಲ್ಬಣಗೊಂಡು ತಿಂಗಳುಗಟ್ಟಲೇ ಕಳೆದಿದ್ದರೂ ಸ್ವಲ್ಪ ಮಟ್ಟಿಗೂ ಸುಧಾರಣೆ ಕಂಡುಬಂದಿಲ್ಲ. ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದೇ ಇಲ್ಲಿನ ಪ್ರಧಾನಿ ಮಹಿಂದ್ರಾ ರಾಜಪಕ್ಸೆ ಕೂಡ ದೇಶವನ್ನೇ ತೊರೆದಿದ್ದಾರೆ.