ನೈರೋಬಿ: ಕೀನ್ಯಾದಲ್ಲಿ ಪೆಟ್ರೋಲ್ ಟ್ರಕ್‌ನಿಂದ ಇಂಧನ ಹೊರ ತೆಗೆಯುವ ಸಂದರ್ಭ ಟ್ಯಾಂಕರ್ ಸ್ಫೋಟಗೊಂಡಿದ್ದು, 13 ಜನ ಮೃತಪಟ್ಟು, 24 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ನಡೆಯುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಇಂಧನ ಟ್ಯಾಂಕರಿನ ತಿರುಚಿದ ಭಗ್ನಾವಶೇಷಗಳ ನಡುವೆ ಸುಟ್ಟ ಮೂಳೆಗಳು ಪತ್ತೆಯಾಗಿದೆ.
ಘಟನೆಗೂ ಮೊದಲು ಸ್ಥಳದಲ್ಲಿದ್ದವರು ಮೊದಲು ಇಂಧನದೊಂದಿಗೆ ಸುರಕ್ಷಿತವಾಗಿ ದೂರ ತೆಗೆದುಕೊಂಡು ಹೋದರು. ಎರಡನೇ ಸುತ್ತಿಗೆ ಹಿಂತಿರುಗಿದಾಗ ಜನಸಂದಣಿ ಹೆಚ್ಚಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡು ಆಸ್ಪತ್ರೆ ಸೇರಿದ ವೈಕ್ಲಿಫ್ ಒಟಿನ ಎಂಬ ಮಹಿಳೆ, ಜ್ವಾಲೆ ಹೊತ್ತಿಕೊಂಡಾಗ ತನ್ನ ಜೆರ್ರಿಕ್ಯಾನ್ ತುಂಬಲು ಪ್ರಾರಂಭಿಸಿದ್ದೆ. ಎಚ್ಚೆತ್ತುಕೊಂಡು ಓಡಲು ಶುರು ಮಾಡಿದೆ. ಆದರೆ ನನ್ನ ಜೊತೆಯಿದ್ದ ಜನರು ಬದುಕುಳಿಯಲಿಲ್ಲ ಎಂದಿದ್ದಾರೆ.