Thursday, 12th December 2024

ಮಾಲ್ಡೀವ್ಸ್: ಮಾಲೆಯ ಗ್ಯಾರೇಜ್‌ನಲ್ಲಿ ಬೆಂಕಿ ಅವಘಡ, ಹತ್ತು ಮಂದಿ ಸಾವು

ಮಾಲ್ಡೀವ್ಸ್: ಮಾಲ್ಡೀವ್ಸ್ ರಾಜಧಾನಿ ಮಾಲೆಯ ಗ್ಯಾರೇಜ್‌ನಲ್ಲಿ ಗುರುವಾರ ಬೆಂಕಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಹತ್ತು ಜನರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಮಾಲೆಯಲ್ಲಿ ಅಗ್ನ ಅವಘಡದಿಂದ ಸ್ಥಳಾಂತರಗೊಂಡ ಮತ್ತು ಹಾನಿಗೊಳ ಗಾದವರಿಗೆ NDMA ಕ್ರೀಡಾಂಗಣದಲ್ಲಿ ಸ್ಥಳಾಂತ ರಿಸುವ ಕೇಂದ್ರವನ್ನು ಸ್ಥಾಪಿಸ ಲಾಗಿದೆ. ಪರಿಹಾರ ನೆರವು ಮತ್ತು ಬೆಂಬಲ ನೀಡಲು ವ್ಯವಸ್ಥೆ ಮಾಡಲಾಗು ತ್ತಿದೆ. ಅದರಲ್ಲಿ ಪ್ರಾಣ ಹಾನಿಗಳ ಬಗ್ಗೆ ಯಾವುದೇ ಉಲ್ಲೇಖಿಸಿಲ್ಲ”.

 

ದ್ವೀಪಸಮೂಹದ ರಾಜಧಾನಿ ಮಾಲೆ ಉನ್ನತ ಮಾರುಕಟ್ಟೆಯ ರಜಾ ತಾಣವೆಂದು ಪ್ರಸಿದ್ಧವಾಗಿದೆ. ಇದು ವಿಶ್ವದ ಅತ್ಯಂತ ಜನ ನಿಬಿಡ ನಗರಗಳಲ್ಲಿ ಒಂದಾಗಿದೆ.

ಈ ಪ್ರದೇಶದ ನೆಲ ಅಂತಸ್ತಿನ ವಾಹನ ರಿಪೇರಿ ಗ್ಯಾರೇಜ್‌ನಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಇದ ರಿಂದ ಕಟ್ಟಡದ ಮೇಲಿನ ಮಹಡಿಯಿಂದ 10 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿಯನ್ನು ನಂದಿಸಲು ಸುಮಾರು ನಾಲ್ಕು ಗಂಟೆಗಳನ್ನು ತೆಗೆದುಕೊಳ್ಳಲಾ ಯಿತು. ಮೃತರಲ್ಲಿ ಒಂಬತ್ತು ಭಾರತೀಯರು ಮತ್ತು ಓರ್ವ ಬಾಂಗ್ಲಾದೇಶ ಪ್ರಜೆಯೂ ಸೇರಿದ್ದಾರೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.