Wednesday, 11th December 2024

ಐಎಂಎಫ್ ಉಪವ್ಯವಸ್ಥಾಪಕ ನಿರ್ದೇಶಕಿಯಾಗಿ ಗೀತಾ ಗೋಪಿನಾಥ್ ಅಧಿಕಾರ ಸ್ವೀಕಾರ ಶೀಘ್ರ

ವಾಷಿಂಗ್ಟನ್: ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಎರಡನೇ ಮುಖ್ಯ ಹುದ್ದೆಯಾದ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕಿ ಯಾಗಿ ಭಾರತೀಯ ಮೂಲದ ಗೀತಾ ಗೋಪಿನಾಥ್ 2022ರ ಜನವರಿಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Geetha Gopinathಮೂಲತಃ ಕರ್ನಾಟಕದ ಮೈಸೂರಿನ ಗೀತಾ ಗೋಪಿನಾಥ್ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಅರ್ಥ ಶಾಸ್ತ್ರಜ್ಞೆಯಾಗಿದ್ದು, ಅವರಿಗೆ ಐಎಂಎಫ್‌ನ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ಬಡ್ತಿ ನೀಡಲಾಗಿದೆ ಎಂದು ಐಎಂಎಫ್ ಘೋಷಿಸಿದೆ. ಈ ಮೂಲಕ ಭಾರತ ಮೂಲದ ಗೀತಾ ಗೋಪಿನಾಥ್‌ಗೆ ಐಎಂ​ಎಫ್​ನ ಪ್ರಮುಖ ಹುದ್ದೆಗೆ ಬಡ್ತಿ ಪಡೆದಿದ್ದಾರೆ.

ಐಎಂಎಫ್​ನ ಉಪ ವ್ಯವಸ್ಥಾಪಕ ನಿರ್ದೇಶಕ ಜೆಫ್ರಿ ಒಕಾಮೊಟೊ ಅವರ ಅಧಿಕಾರಾವಧಿ 2022ರ ಜನವರಿಯಲ್ಲಿ ಮುಕ್ತಾಯ ವಾಗಲಿದೆ. ಹೀಗಾಗಿ, ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್‌ರನ್ನು ನೇಮಕ ಮಾಡಲಾಗಿದೆ. ಮೂರು ವರ್ಷ ಐಎಂಎಫ್​ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿರುವ ಗೀತಾ ಗೋಪಿನಾಥ್ ಮುಂದಿನ ಜನವರಿಯಲ್ಲಿ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕ ರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಐಎಂಎಫ್‌ನ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಜೆಫ್ರಿ ಒಕಾಮೊಟೊ ಅವರ ಅಧಿಕಾರಾವಧಿ 2022ರ ಮೊದಲ ತಿಂಗಳು ಮುಕ್ತಾಯವಾಗಲಿದೆ. ಆ ಸ್ಥಾನಕ್ಕೆ ಗೀತಾ ಗೋಪಿನಾಥ್ ಬಡ್ತಿ ಪಡೆದಿದ್ದಾರೆ. ಗೀತಾ ಗೋಪಿನಾಥ್ ಐಎಂಎಫ್​ನಲ್ಲಿ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜನವರಿಯಲ್ಲಿ ಗೀತಾ ಗೋಪಿನಾಥ್ ಅಧಿಕಾರಾವಧಿ ಮುಕ್ತಾಯವಾಗು ತ್ತಿತ್ತು.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಇತಿಹಾಸದಲ್ಲಿ ಮೊದಲ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದ ಗೀತಾ ಗೋಪಿನಾಥ್, ಐಎಂಎಫ್​ನ ಸದಸ್ಯ ರಾಷ್ಟ್ರಗಳಿಂದ ಮೆಚ್ಚುಗೆ ಗಳಿಸಿದ್ದಾರೆ.