ಇಸ್ರೇಲ್ (Israel) ದೇಶವನ್ನು ಟೀಕಿಸಿ ಉಗ್ರಗಾಮಿ ಹಮಾಸ್ (Hamas) ಸಂಘನೆ ಶ್ಲಾಘಿಸಿದ್ದ ಪಾಕಿಸ್ತಾನದ (Pakistan) ಪ್ರಜೆ 54 ವರ್ಷದ ಇಮಾಮ್ ಜುಲ್ಫಿಕರ್ ಖಾನ್ನನ್ನು ದೇಶದಿಂದ ಹೊರಹಾಕಲು ಇಟಲಿ ಸರ್ಕಾರ (Georgia Meloni) ಆದೇಶಿಸಿದೆ. 1995ರಿಂದ ಇಟಲಿಯಲ್ಲಿ ವಾಸ ಮಾಡುತ್ತಿದ್ದ ಇಮಾಮ್ ಮನೆಯ ಲೈಸನ್ಸ್ ಕೂಡ ರದ್ದು ಮಾಡಲಾಗಿದೆ. ತನ್ನ ಹೇಳಿಕೆಗಳಿಂದ ಪದೇ ಪದೆ ಜಾರ್ಜಿಯಾ ಮೆಲೋನಿ ಸರ್ಕಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದ ಇಮಾಮ್ ಜುಲ್ಫಿಕರ್ ಖಾನ್ ಗಡಿಪಾರು ಮಾಡಲು 2024 ರ ಅಕ್ಟೋಬರ್ 8ರಂದು ಇಟಾಲಿಯನ್ ಸಚಿವ ಮ್ಯಾಟಿಯೊ ಪಿಯಾಂಟೆಡೋಸಿ ಅವರು ಆದೇಶಿಸಿದ್ದಾರೆ.
ಇಮಾಮ್ ಜುಲ್ಫಿಕರ್ ಖಾನ್ ಹಮಾಸ್ನ ಭಯೋತ್ಪಾದಕ ಗುಂಪುಗಳನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆದಿದ್ದು, ಇಸ್ರೇಲ್ ಅನ್ನು ಕೊಲೆಗಾರ, ಅಮೆರಿಕವನ್ನು ಭಯೋತ್ಪಾದಕ ದೇಶ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನದಲ್ಲಿ ಜನಿಸಿರುವ ಇಮಾಮ್ ಕಳೆದ ಕೆಲವು ವರ್ಷಗಳಿಂದ ಇಟಲಿಯ ಬೊಲೊಗ್ನದಲ್ಲಿ ವಾಸಿಸುತ್ತಿದ್ದ. ಭಯೋತ್ಪಾದಕ ಸಂಘಟನೆ ಹಮಾಸ್ನ ಕಟ್ಟಾ ಬೆಂಬಲಿಗನಾಗಿದ್ದ ಕಾರಣ ಮೆಲೋನಿ ಸರ್ಕಾರ ಮೂಲಭೂತವಾದಿ ಇಮಾಮ್ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದೆ.
ಗಾಜಾ ಯುದ್ಧದ ಬಗ್ಗೆ ಹಲವಾರು ಆಕ್ಷೇಪಾರ್ಹ ವಿಡಿಯೋಗಳನ್ನು ಇಮಾಮ್ ಪೋಸ್ಟ್ ಮಾಡಿದ್ದ ಇಟಲಿ ಸರ್ಕಾರದ ವಿರುದ್ಧವೂ ಹೇಳಿಕೆಗಳನ್ನು ನೀಡಿರುವ ಇಮಾಮ್ ಇಟಲಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ, ಅವರು ತಮ್ಮ ಹೇಳಿಕೆಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು, ಯಹೂದಿಗಳು, ಸ್ತ್ರೀ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದ.
ರಾಜ್ಯದ ತೆರಿಗೆ ಹೇರಿಕೆಯನ್ನು ವಿರೋಧಿಸಲು ಮುಸ್ಲಿಮರನ್ನು ಪ್ರೋತ್ಸಾಹಿಸುತ್ತಿದ್ದ ಇಮಾಮ್, ಮುಸ್ಲಿಮರು ದೇಶದ ಸಂಪತ್ತು. ಅವರು ಉಳಿಯಬೇಕು. ಮಾನವ ಜನಾಂಗದ ಅಳಿವಿನಿಂದ ರಕ್ಷಿಸಲು ಮುಸ್ಲಿಮರು ಹೋರಾಡುವ ಹಕ್ಕನ್ನು ಹೊಂದಿದ್ದಾರೆ ಎಂದು ವಾದಿಸುತ್ತಿದ್ದ.
ಹಮಾಸ್ ಒಂದು ಭಯೋತ್ಪಾದಕ ಸಂಘಟನೆಯಲ್ಲ. ತನ್ನ ಪ್ರದೇಶವನ್ನು ರಕ್ಷಿಸಲು ಹೋರಾಡುತ್ತಿದೆ. ಇಸ್ರೇಲ್ ಮತ್ತು ಅಮೆರಿಕನ್ನರು ಭಯೋತ್ಪಾದಕರು ಮತ್ತು ಕೊಲೆಗಾರರು ಎಂದು ಎಂದು ಹೇಳಿರುವ ಇಮಾಮ್ ಹಮಾಸ್, ಹೆಜ್ಬುಲ್ಲಾ, ಸಿರಿಯಾ, ಇರಾನ್ ಮತ್ತು ಯೆಮೆನ್ನಂತಹ ಗುಂಪುಗಳು ನಾಗರಿಕರಿಗೆ ಹಾನಿ ಮಾಡಲು ಪ್ರಯತ್ನಿಸಲಿಲ್ಲ ಮತ್ತು ಅವರು ಪಾಶ್ಚಿಮಾತ್ಯ ರಾಜ್ಯಗಳಿಗೆ ದೇವರ ಶಿಕ್ಷೆಯನ್ನು ವಿಧಿಸಿದ್ದಾನೆ ಹೇಳಿದ್ದ . 2023ರ ನವೆಂಬರ್ ನಲ್ಲಿ ಇಟಾಲಿಯನ್ ಟಿವಿ ಶೋ ಡ್ರಿಟ್ಟೊ ಇ ರೋವೆಸ್ಸಿಯೊದಲ್ಲಿ ಕಾಣಿಸಿಕೊಂಡ ಖಾನ್, ಇಸ್ರೇಲೀಯರನ್ನು ಭಯೋತ್ಪಾದಕರು ಮತ್ತು ಮೋಸಗಾರರು ಎಂದು ಹೇಳಿದ್ದ.
2024ರ ಜುಲೈ ನಲ್ಲಿ ಇಕ್ರಾ ಇಸ್ಲಾಮಿಕ್ ಸೆಂಟರ್ನ ಫೇಸ್ಬುಕ್ ಪುಟದಲ್ಲಿ ಖಾನ್. ಇಸ್ಲಾಂನಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಇಟಾಲಿಯನ್- ಈಜಿಪ್ಟ್ ಪತ್ರಕರ್ತ ಮ್ಯಾಗ್ಡಿ ಕ್ರಿಸ್ಟಿಯಾನೋ ಅಲ್ಲಮ್ ವಿಡಿಯೋಗಳನ್ನು ಪೋಸ್ಟ್ ಮಾಡಿ ಟೀಕಿಸಿದ್ದ.
ಹಲವಾರು ಸಂದರ್ಭಗಳಲ್ಲಿ ಖಾನ್ ಇಟಾಲಿಯನ್ ಸರ್ಕಾರಿ ಅಧಿಕಾರಿಗಳಿಗೆ ಸವಾಲು ಹಾಕಿದ ಇಮಾಮ್, ಇಟಾಲಿಯನ್ ಸಂವಿಧಾನವು ತನಗೆ ಬೇಕಾದುದನ್ನು ಹೇಳಲು ರಕ್ಷಣೆ ಒದಗಿಸಿದೆ ಎಂದು ಪ್ರತಿಪಾದಿಸಿದ್ದ. ಅಕ್ಟೋಬರ್ 7ರಂದು ಇಮಾಮ್ ಗಡಿಪಾರಿಗೆ ಆದೇಶಿಸಿದ ಇಟಾಲಿಯನ್ ಅಧಿಕಾರಿಗಳು, ಪ್ಯಾಲೇಸ್ತೀನಿಯನ್ ಪರವಾದ ಭಯೋತ್ಪಾದನೆ ಅಥವಾ ಉಗ್ರವಾದ ದೇಶವು ಸಹಿಸುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂರಕ್ಷಿಸಲಾಗಿದ್ದರೂ ದ್ವೇಷದ ಭಾಷಣ ಮತ್ತು ಭಯೋತ್ಪಾದನೆಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Nobel Peace Prize 2024: ಜಪಾನಿನ ಸಂಸ್ಥೆ ನಿಹಾನ್ ಹಿಡಂಕ್ಯೊಗೆ ನೊಬೆಲ್ ಶಾಂತಿ ಪ್ರಶಸ್ತಿ
ಇಟಲಿಯಲ್ಲಿ ಮತ್ತೊಬ್ಬ ಇಮಾಮ್ ಮೊಹಮ್ಮದ್ ಹನೂನ್ ಅವರನ್ನು ಹೊರಹಾಕಲಾಗಿದ್ದು, ಆತನ ಬಳಿಕ ಇದೀಗ ಇಮಾಮ್ ಜುಲ್ಫಿಕರ್ ಖಾನ್ನ್ನನು ಹೊರಹಾಕಲಾಗಿದೆ. ಜಿನೋವಾ ಮೂಲದ ಹನೂನ್ ಪ್ಯಾಲೆಸ್ತೀನಿಯರ ಪರವಾಗಿ ಹಣ ಸಂಗ್ರಹಿಸುತ್ತಿದ್ದ ಹಮಾಸ್ ಸದಸ್ಯ ಎಂದು ಗುರುತಿಸಲಾಗಿದೆ.
ಹನೂನ್ ವಿರುದ್ಧ ಆರೋಪಕ್ಕೆ ಯುನೈಟೆಡ್ ಸ್ಟೇಟ್ಸ್ನಿಂದ ದಾಖಲೆಗಳು ಲಭ್ಯವಾದ ಬಳಿಕ ಅಕ್ಟೋಬರ್ 8ರಂದು ಸಂಜೆ ಪ್ರಾಸಿಕ್ಯೂಟರ್ ನಿಕೋಲಾ ಪಿಯಾಸೆಂಟೆ ಅವರು ಹನೂನ್ ಅವರನ್ನು ದೇಶದಿಂದ ಹೊರಹಾಕಿ ಆದೇಶ ನೀಡಿದರು.