ಬರ್ಲಿನ್: ಇಂಗ್ಲೆಂಡ್, ಭಾರತ ಹಾಗೂ ಇತರೆ ಮೂರು ದೇಶಗಳ ಪ್ರಯಾಣಿ ಕರ ಮೇಲೆ ಹೇರಲಾಗಿದ್ದ ಪ್ರಯಾಣಿಕ ನಿಷೇಧವನ್ನು ಜರ್ಮನಿ ತೆಗೆದು ಹಾಕಿದೆ. ಕೋವಿಡ್-19 ರ ಡೆಲ್ಟಾ ರೂಪಾಂತರ ಅಪ್ಪಳಿಸಿರುವ ಹಿನ್ನೆಲೆಯಲ್ಲಿ ಜರ್ಮನಿ ದೇಶವು, ವಿದೇಶಿಗರಿಗೆ ಪ್ರವೇಶವನ್ನು ನಿರಾಕ ರಿಸಿತ್ತು.
ಭಾರತ, ನೇಪಾಳ, ರಷ್ಯಾ, ಪೋರ್ಚುಗಲ್ ಹಾಗೂ ಇಂಗ್ಲೆಂಡ್ ಅನ್ನು ಬುಧವಾರದಿಂದ “ಹೆಚ್ಚಿನ ಸಂಭವನೀಯ ಪ್ರದೇಶಗಳು” ಎಂದು ಮರು ವರ್ಗೀಕರಿಸಲಾಗುವುದು ಎಂದು ವರದಿಯಾಗಿದೆ.
ಜರ್ಮನಿಯ ‘ವೈರಸ್ ರೂಪಾಂತರ ಪ್ರದೇಶ’ ಪಟ್ಟಿಯಲ್ಲಿ ಹನ್ನೊಂದು ದೇಶಗಳು ಉಳಿದಿವೆ. ಅವು, ಬೋಟ್ಸ್ವಾನ, ಬ್ರೆಜಿಲ್, ಎಸ್ವಾಟಿನಿ, ಲೆಸೊಥೊ, ಮಲಾವಿ, ಮೊಜಾಂಬಿಕ್, ನಮೀಬಿಯಾ, ಜಾಂಬಿಯಾ, ಜಿಂಬಾಬ್ವೆ, ದಕ್ಷಿಣ ಆಫ್ರಿಕಾ ಮತ್ತು ಉರುಗ್ವೆ ದೇಶಗಳು ಈ ಪಟ್ಟಿ ಯಲ್ಲಿವೆ.
ಬ್ರಿಟನ್ ಮೇ 23 ರಿಂದ ಅಗ್ರ ಕೊರೊನಾವೈರಸ್ ಅಪಾಯದ ವಿಭಾಗದಲ್ಲಿದೆ. ವಿಮಾನಯಾನ ಸೇವೆಗಳು ಸೇರಿದಂತೆ ಇತರೆ ನಿರ್ಬಂಧ ಗಳನ್ನು ಈ ದೇಶಗಳ ಮೇಲೆ ಹೇರಲಾಗಿತ್ತು. ಅಂತೆಯೇ ಈ ಪಟ್ಟಿಯಲ್ಲಿ ರುವ ದೇಶಗಳಿಂದ ಜರ್ಮನಿಗೆ ಆಗಮಿಸುವವರು ಕಡ್ಡಾಯ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಬೇಕಿತ್ತು.
ಇದೀಗ ಈ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, “ಹೆಚ್ಚಿನ ಸಂಭವ ನೀಯ ಪ್ರದೇಶಗಳಿಂದ” ಬರುವ ಜನರು, ಅವರು ಸಂಪೂರ್ಣ ವಾಗಿ ಲಸಿಕೆ ಹಾಕಿದ್ದರೆ ಅಥವಾ ಕೋವಿಡ್-19 ನಿಂದ ಚೇತರಿಸಿಕೊಂಡಿರುವುದನ್ನು ಸಾಬೀತುಪಡಿಸಿದರೆ ಅವರಿಗೆ ಸಂಪರ್ಕತಡೆ ನಿರ್ಬಂಧದಿಂದ ವಿನಾಯಿತಿ ನೀಡಲಾಗುತ್ತದೆ. ಇತರರು ಐದು ದಿನಗಳ ಸಂಪರ್ಕತಡೆ ನಂತರ ನೆಗೆಟಿವ್ ವರದಿ ನೀಡಬೇಕಾಗುತ್ತದೆ.
ಈ ಹಿಂದೆ ಬ್ರಿಟನ್ ನಿಂದ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ಶೀಘ್ರದಲ್ಲೇ ಸಡಿಲಿಸಲಾಗುವುದು ಎಂದು ಜರ್ಮನಿ ಚಾನ್ಸಿಲರ್ ಏಂಜೆಲಾ ಮಾರ್ಕೆಲ್ ಶುಕ್ರವಾರ ಬ್ರಿಟನ್ ಭೇಟಿಯ ಸಂದರ್ಭದಲ್ಲಿ ಹೇಳಿದ್ದರು.