Thursday, 12th December 2024

God of Marriage: ಈತ ನಿರುದ್ಯೋಗಿ; ಆದರೆ ನಾಲ್ವರು ಪತ್ನಿಯರು, ಇಬ್ಬರು ಪ್ರೇಯಸಿಯರು!

God of Marriage

ಯಾವುದೇ ಕೆಲಸ, ಆದಾಯ ಇಲ್ಲದೇ ಇದ್ದರೂ ನಾಲ್ಕು ಹೆಂಡತಿಯರ ಗಂಡನಾಗಿ, ಇಬ್ಬರು ಗೆಳತಿಯರೊಂದಿಗೆ ಸುಖವಾದ ಜೀವನ ನಡೆಸುತ್ತಿರುವ ಜಪಾನ್‌ನ ಈ ವ್ಯಕ್ತಿಗೆ (Japanese Man) 54 ಮಕ್ಕಳ ತಂದೆಯಾಗಬೇಕು (father of 54 children), ತನ್ನನ್ನು ತಾನು ಮದುವೆಯ ದೇವರು (God of Marriage) ಎಂದೆನಿಸಿಕೊಳ್ಳಬೇಕು ಎನ್ನುವ ಆಸೆಯಂತೆ. ಜಪಾನ್‌ನ ಹುಕ್ಕಯಿಡೊ ಉತ್ತರ ಪ್ರಾಂತ್ಯದ 36 ವರ್ಷದ ರ್ಯುಟಾ ವಟನಾಬೆ ಎಂಬಾತ ನಾಲ್ವರು ಪತ್ನಿಯರು ಮತ್ತು ಇಬ್ಬರು ಗೆಳತಿಯರೊಂದಿಗೆ ವಾಸಿಸುತ್ತಿದ್ದಾನೆ. ಹೆಂಡತಿ, ಗೆಳತಿಯರ ಸಂಪಾದನೆಯಿಂದಲೇ ಜೀವನ ಸಾಗಿಸುತ್ತಿದ್ದಾನೆ.

ಹತ್ತು ವರ್ಷಗಳಿಂದ ನಿರುದ್ಯೋಗಿಯಾಗಿರುವ ವಟನಾಬೆ ಮದುವೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾನೆ. ಈ ಮೂಲಕ ಅತ್ಯಧಿಕ ವಿವಾಹವಾಗಿ “ವಿವಾಹದ ದೇವರು” ಆಗಲು ಬಯಸುವುದಾಗಿ ಹೇಳಿದ್ದಾನೆ. ಸದ್ಯ ನಾಲ್ವರು ಪತ್ನಿಯರು, ಇಬ್ಬರು ಗೆಳತಿಯರನ್ನು ಹೊಂದಿರುವ ಅತ ತನ್ನ ಜೀವನಕ್ಕಾಗಿ ಅವರ ಆದಾಯವನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದಾನೆ.

ಕಾನೂನು ಪ್ರಕಾರವಾಗಿ ನೋಂದಣಿಯಾಗದೆ ನಾಲ್ವರು ಪತ್ನಿಯರನ್ನು ಹೊಂದಿರುವ ಆತನೊಂದಿಗೆ ದೀರ್ಘಾವಧಿಯ ಸಹಬಾಳ್ವೆ ನಡೆಸುವ, ಜವಾಬ್ದಾರಿಗಳನ್ನು ಹಂಚಿಕೊಳ್ಳುವುದನ್ನು ಒಪ್ಪಿಕೊಂಡು ವಿವಾಹವಾಗಿದ್ದಾರೆ ಎನ್ನಲಾಗಿದೆ.

ವಟನಾಬೆ ಈಗಾಗಲೇ 10 ಮಕ್ಕಳ ತಂದೆಯಾಗಿದ್ದು, ಅವರಲ್ಲಿ ಇಬ್ಬರು ಆತನ ಮೂವರು ಪತ್ನಿಯರೊಂದಿಗೆ ವಾಸಿಸುತ್ತಿದ್ದಾರೆ. ಅಡುಗೆ, ಮನೆಗೆಲಸ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸುವ ವಟನಾಬೆ ಮನೆಯ ನಿರ್ವಹಣೆಗೆ ತಿಂಗಳಿಗೆ ಸುಮಾರು 5 ಲಕ್ಷ ರೂ. ಖರ್ಚು ಮಾಡುತ್ತಾನೆ. ಇದನ್ನು ಅವನ ಹೆಂಡತಿಯರು ಮತ್ತು ಗೆಳತಿಯರ ಸಮಾನವಾಗಿ ಹಂಚಿಕೊಂಡಿದ್ದಾರೆ.

ವಟನಾಬೆಗೆ ನಾಲ್ಕನೇ ಹೆಂಡತಿಯೂ ಇದ್ದು, 24 ವರ್ಷದ ಆಕೆ ಆತನಿಂದ ದೂರವಾಗಿದ್ದಾಳೆ. ಡೇಟಿಂಗ್ ಅಪ್ಲಿಕೇಶನ್‌ ಮೂಲಕ ಅವನು ಮಹಿಳೆಯರೊಂದಿಗೆ ಸಂಪರ್ಕ ಸಾಧಿಸುತ್ತಾನೆ ಎಂದು ಸಂದರ್ಶನವೊಂದರಲ್ಲಿ ಆತ ಹೇಳಿಕೊಂಡಿದ್ದಾನೆ.

Bomb Threat: ದಿಲ್ಲಿಯಿಂದ ಲಂಡನ್‌ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್‌ ಬೆದರಿಕೆ; ಜರ್ಮನಿಯಲ್ಲಿ ತುರ್ತು ಲ್ಯಾಂಡಿಂಗ್‌

ನಾನು ಮಹಿಳೆಯರನ್ನು ಪ್ರೀತಿಸುತ್ತೇನೆ. ಪ್ರತಿಯೊಬ್ಬರನ್ನು ಸಮಾನವಾಗಿ ಪ್ರೀತಿಸುವಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಅವನು ಹೇಳಿಕೊಂಡಿದ್ದಾನೆ.