ಸ್ಯಾನ್ ಫ್ರಾನ್ಸಿಸ್ಕೋ: ಕರೋನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಗೂಗಲ್ ಸಂಸ್ಥೆಯು ತಮ್ಮ ಸಿಬ್ಬಂದಿಯ ವರ್ಕ್ ಫ್ರಾಮ್ ಹೋಮ್ ಅವಧಿಯನ್ನು ಮುಂದಿನ ವರ್ಷವರೆಗೂ ವಿಸ್ತರಿಸಿದೆ.
ಜನವರಿ 10ರವರೆಗೂ ಗೂಗಲ್ ಕ್ಯಾಂಪಸ್‌ಗೆ ಕಾರ್ಯ ನಿರ್ವಹಿಸಲು ಹಿಂತಿರುಗುವ ಅಗತ್ಯವಿಲ್ಲ. ಸ್ಥಳೀಯ ಮಟ್ಟದಲ್ಲಿ ಮುಖ್ಯ ಕಚೇರಿಗಳನ್ನು ಯಾವಾಗ ಪುನಾರಂಭಿಸಬೇಕು ಎಂಬುದನ್ನು ವಿವೇಚನೆಗೆ ಬಿಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಸುಂದರ್ ಪಿಚೈ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಹಲವು ವಾಣಿಜ್ಯ ಕಂಪನಿಗಳು ಪುನಾರಂಭಗೊಂಡಿವೆ. ಅಲ್ಲದೇ ಸ್ವಯಂಪ್ರೇರಿತರಾಗಿ ಆಗಮಿಸಿದ ಹತ್ತಾರು ಗೂಗಲ್ ಸಿಬ್ಬಂದಿಯನ್ನು ಸ್ವಾಗತಿಸುತ್ತೇವೆ. ನಾವು ಒಟ್ಟಾಗಿ ಅದನ್ನು ಸಾಧಿಸುವ ಆಶಾವಾದವನ್ನು ಹೊಂದಿದ್ದೇವೆ.” ಎಂದು ಸುಂದರ್ ಪಿಚೈ ತಿಳಿಸಿದ್ದಾರೆ.
ಗೂಗಲ್ ಉದ್ಯೋಗಿಗಳು ತಮ್ಮ ಕಛೇರಿಗಳಿಗೆ ಹಿಂದಿರುಗುವ 30 ದಿನಗಳ ಮೊದಲೇ ಸೂಚನೆ ನೀಡಲಾಗು ವುದು. ಗೂಗಲ್, ಫೇಸ್‌ಬುಕ್ ಮತ್ತು ಇತರ ತಾಂತ್ರಿಕ ವಲಯದ ದೈತ್ಯ ಸಂಸ್ಥೆಗಳು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡದಂತೆ ನಿಯಂತ್ರಿಸಲು ಕೈಜೋಡಿಸಿದವು. ಅದೇ ನಿಟ್ಟಿನಲ್ಲಿ ಇದೀಗ ಮುಖ್ಯ ಕಚೇರಿಗೆ ಸಿಬ್ಬಂದಿ ಆಗಮಿಸುವ ಅವಧಿಯನ್ನು ಮತ್ತಷ್ಟು ಕಾಲ ವಿಸ್ತರಿಸಿವೆ.
ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ದೇಶಗಳಲ್ಲಿ ಸೋಂಕಿನ ಡೆಲ್ಟಾ ರೂಪಾಂತರವು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಟೆಕ್ ಸಂಸ್ಥೆಗಳು ಕಚೇರಿಗಳನ್ನು ಸುರಕ್ಷಿತ ವಾಗಿಸಲು ಲಸಿಕೆ ಮತ್ತು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದವು.