ಸ್ಟಾಕ್‌ಹೋಮ್: 2021ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಕಾದಂಬರಿಕಾರ ಅಬ್ದುಲ್ ರಜಾಕ್ ಗುರ್ನಾ ಭಾಜನ ರಾಗಿದ್ದಾರೆ.
ಪೂರ್ವ ಆಫ್ರಿಕಾದ ತಾಂಜೇನಿಯಾದ (ಜಾಂಜಿಬಾರ್) ಅಬ್ದುಲ್ ರಜಾಕ್ ಗುರ್ನಾ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ
ಗಲ್ಫ್ ರಾಷ್ಟ್ರಗಳಲ್ಲಿನ ವಸಾಹತುಶಾಹಿಯ ಪರಿಣಾಮಗಳು, ಅಲ್ಲಿನ ಸಂಸ್ಕೃತಿ, ಏಷ್ಯಾ-ಆಫ್ರಿಕಾ ಖಂಡಗಳ ನಡುವಿನ ದೇಶ ಗಳಲ್ಲಿನ ವಲಸಿಗರ ಭವಿಷ್ಯದ ಕುರಿತಾದ ಸಹಾನುಭೂತಿ ಹಾಗೂ ರಾಜಿಯಿಲ್ಲದ ನಿಲುವುಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ನೊಬೆಲ್ ಸಮಿತಿ ತಿಳಿಸಿದೆ.
ಅಬ್ದುಲ್ ರಜಾಕ್ ಗುರ್ನಾಮೂರು ಕಾದಂಬರಿಗಳನ್ನು ಬರೆದಿದ್ದಾರೆ. 1994ರಲ್ಲಿ ಮೊದಲ ಕಾದಂಬರಿ ‘ಪ್ಯಾರಡೈಸ್’, 2001ರಲ್ಲಿ ‘ಬೈ ದಿ ಸೀ’, 2005ರಲ್ಲಿ ‘ಡೆಜರ್ಸನ್’ ಕಾದಂಬರಿ ಪ್ರಕಟಿಸಿದ್ದಾರೆ.