Wednesday, 11th December 2024

ಹೈಟಿ ಅಧ್ಯಕ್ಷ ಜೊವೆನೆಲ್ ಮೊಯಿಸ್ ಹತ್ಯೆ

ಪೋರ್ಟ್ ಒ ಪ್ರಿನ್ಸ್: ಹೈಟಿ ದೇಶದ ಅಧ್ಯಕ್ಷ ಜೊವೆನೆಲ್ ಮೊಯಿಸ್ ಅವರನ್ನು ಅಪರಿಚಿತ ಜನರ ಗುಂಪು ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.

ಘಟನೆಯಲ್ಲಿ ಮೊಯಿಸ್ ಪತ್ನಿ ಮಾರ್ಟಿನ್ ಮೊಯಿಸ್ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಧ್ಯಂತರ ಪ್ರಧಾನಿ ಕ್ಲೌಡ್ ಜೋಸೆಫ್ ಮಾಹಿತಿ ನೀಡಿದ್ದಾರೆ. ಕೆರೆಬಿಯನ್ ದೇಶದಲ್ಲಿನ ರಾಜಕೀಯ ಅಸ್ಥಿರತೆ, ಹಣಕಾಸು ಮುಗ್ಗಟ್ಟಿನ ನಡುವೆಯೇ ಅಧ್ಯಕ್ಷರ ಹತ್ಯೆ ನಡೆದಿದೆ.

2017ರಿಂದ ಮೊಯಿಸ್ ಅವರು ಹೈಟಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಚುನಾವಣೆ ನಡೆಸಲು ಅವರು ವಿಫಲರಾಗಿದ್ದಾರೆ ಎಂದು ಆರೋಪಿಸ ಲಾಗಿದೆ. 2021ರ ಫೆಬ್ರುವರಿಯಲ್ಲಿಯೇ ಮೊಯಿಸ್ ಅವರ ಅಧಿಕಾರಾವಧಿ ಅಂತ್ಯಗೊಂಡಿತ್ತು.