Friday, 22nd November 2024

ಹಮಾಸ್ ಉಗ್ರರಿಂದ 2ನೇ ಹಂತದಲ್ಲಿ 17 ಒತ್ತೆಯಾಳುಗಳ ಬಿಡುಗಡೆ

ಟೆಲ್ ಅವಿವ್(ಇಸ್ರೇಲ್): ಹಮಾಸ್ ಉಗ್ರರು ಎರಡನೇ ಹಂತದಲ್ಲಿ​ ತನ್ನಲ್ಲಿದ್ದ 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ 13 ಇಸ್ರೇಲ್ ಮತ್ತು 4 ಥಾಯ್ಲೆಂಡ್ ನಾಗರಿಕರು ಸೇರಿದ್ದಾರೆ.

ಹಮಾಸ್-ಇಸ್ರೇಲ್ ನಡುವಿನ ತಾತ್ಕಾಲಿಕ ಕದನ ವಿರಾಮ ಒಪ್ಪಂದದ ಭಾಗವಾಗಿ ಈ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಾಗಿದ್ದು, ಈಜಿಪ್ಟ್‌ಗೆ ಕಳುಹಿಸಲಾಗಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ. ಹಮಾಸ್​ ಈ ಒತ್ತೆಯಾಳುಗಳನ್ನು ಮೊದಲು ರೆಡ್‌ಕ್ರಾಸ್ ಸಂಸ್ಥೆಗೆ ಹಸ್ತಾಂತರಿಸಿದ್ದು ನಂತರ ಈಜಿಪ್ಟ್‌ಗೆ ಕರೆದೊಯ್ಯಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ತಿಳಿಸಿದೆ.

ಒತ್ತೆಯಾಳುಗಳನ್ನು ಕರೆದೊಯ್ಯುವ ಬೆಂಗಾವಲು ಪಡೆ ಕೆರೆಮ್​ ಶಾಲೋಮ್ ಕ್ರಾಸಿಂಗ್‌ಗೆ ತೆರಳಿತು. ಅಲ್ಲಿ ಇಸ್ರೇಲ್​ನ ಅಧಿಕಾರಿಗಳು ಹೆಸರುಗಳ ಪಟ್ಟಿ ಪರಿಶೀಲಿಸಿದ್ದಾರೆ. ಇಸ್ರೇಲ್ ರಕ್ಷಣಾ ಪಡೆ ಪ್ರತಿನಿಧಿಗಳು ತಮ್ಮವರ ಮಾಹಿತಿ ನಿಯಮಿತವಾಗಿ ನವೀಕರಿಸುತ್ತಿದ್ದಾರೆ. ಬಿಡುಗಡೆಯಾಗಿರುವ ಒತ್ತೆಯಾಳು ಗಳಲ್ಲಿ ಹಿಲಾ ರೋಟೆಮ್ ಎಂಬ 12 ವರ್ಷದ ಬಾಲಕಿಯೂ ಸೇರಿದ್ದಾಳೆ.