ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರು ಪೆನ್ಸಿಲ್ವೇನಿಯಾದ ಆರೋಗ್ಯ ಇಲಾಖೆ ಉನ್ನತಾ ಧಿಕಾರಿ ರಾಚೆಲ್ ಲೆವೈನ್ ಅವರನ್ನು ಮುಂದಿನ ಅಮೆರಿಕ ಆರೋಗ್ಯ ಸಹಾಯಕ ಕಾರ್ಯದರ್ಶಿಯಾಗಿ ನಾಮನಿರ್ದೇಶನ ಮಾಡಿದ್ದಾರೆ. ಇದು ಒಪ್ಪಿತವಾದರೆ, ಸೆನೇಟ್ ದೃಢೀಕರಿಸಿದ ಮೊದಲ ತೃತೀಯ ಲಿಂಗಿ ಅಧಿಕಾರಿ ಎನಿಸಿ ಕೊಳ್ಳಲಿದ್ದಾರೆ.
ಈ ನಾಮನಿರ್ದೇಶನ ಐತಿಹಾಸಿಕ ಎಂದು ವಿವರಿಸಿರುವ ಬೈಡನ್, ಕೊರೊನಾ ಸೋಂಕಿನ ನಡುವೆ ಸಾರ್ವಜನಿಕ ಆರೋಗ್ಯ ಸುಧಾರಿಸುವ ಎಲ್ಲಾ ಪ್ರಯತ್ನವನ್ನು ರಾಚೆಲ್ ನಿರ್ವಹಿಸುವ ವಿಶ್ವಾಸವಿದೆ. 64 ವರ್ಷದ ಮಕ್ಕಳ ತಜ್ಞೆ ಲೆವೈನ್, ಅಮೆರಿಕ ಸೆನೇಟ್ ದೃಢೀಕರಿಸಿದ ಮೊದಲ ತೃತೀಯ ಲಿಂಗಿ ಅಧಿಕಾರಿ ಎನಿಸಿಕೊಳ್ಳಲಿದ್ದಾರೆ.
ಪ್ರಸ್ತುತ ರಾಚೆಲ್ ಪೆನಿಸೆಲ್ವಿಯಾದ ಆರೋಗ್ಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸೋಂಕಿನ ನಡುವೆ ಸಾರ್ವಜನಿಕ ಆರೋಗ್ಯ ಸುಧಾರಣೆಗೆ ಶ್ರಮ ವಹಿಸಿ ಗಮನ ಸೆಳೆದಿದ್ದಾರೆ.