ಲಂಡನ್: ಕೋವಿಡ್-19 ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಮಹಿಳಾ ಸಹೋ ದ್ಯೋಗಿಗೆ ಚುಂಬಿಸಿದ್ದನ್ನು ಸ್ವತಃ ತಾವೇ ಒಪ್ಪಿಕೊಂಡಿದ್ದು, ಬ್ರಿಟನ್ ನ ಸಂಪುಟ ಸಚಿವ ಮ್ಯಾಟ್ ಹಾನ್‌ಕಾಕ್ ಆರೋಗ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಾಕಿಸ್ತಾನದ ಮೂಲದ, ಕನ್ಸರ್ವೇಟೀವ್ ಪಕ್ಷದ ಸಂಸದ, ಬ್ರಿಟನ್ ನ ಮಾಜಿ ಚಾನ್ಸಿಲರ್ ಸಾಜಿದ್ ಜಾವಿದ್ ನೂತನ ಆರೋಗ್ಯ ಕಾರ್ಯದರ್ಶಿಯಾಗಿ ನೇಮಕಗೊಳ್ಳಲಿದ್ದಾರೆ.
ಟ್ವಿಟರ್ ನಲ್ಲಿ ವಿಡಿಯೋವನ್ನೂ ಪೋಸ್ಟ್ ಮಾಡಿರುವ ಹಾನ್ಕಾಕ್, ನಾನು ಆರೋಗ್ಯ ಹಾಗೂ ಸಾಮಾಜಿಕ ಕಾಳಜಿ ಕಾರ್ಯದರ್ಶಿಯ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಪ್ರಧಾನಿಯನ್ನು ಭೇಟಿ ಮಾಡಿದ್ದೆ. ಕಾನೂನುಗಳನ್ನು ರಚಿಸುವ ನಾವೇ ಅದನ್ನು ಪಾಲಿಸಬೇಕು, ಅದಕ್ಕಾಗಿಯೇ ರಾಜೀನಾಮೆ ನೀಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ವಿವಾಹಿತರಾಗಿರುವ ಹಾನ್ಕಾಕ್ (42) ತಮ್ಮ ಕಚೇರಿಯಲ್ಲಿದ್ದ ಗಿನಾ ಕೊಲಾಡಾಂಜೆಲೊ ಎಂಬ ಮಹಿಳೆಯನ್ನು ಚುಂಬಿಸುತ್ತಿರುವುದು ಸಿಸಿಟಿವಿ ಕ್ಯಾಮರಾ ದೃಶ್ಯ ಗಳಿಂದ ಬಹಿರಂಗಗೊಂಡಿತ್ತು. ಕೊಲಾಡಾಂಜೆಲೊ ಹಾನ್ಕಾಕ್ ಅವರ ಹಳೆಯ ಸ್ನೇಹಿತೆ ಹಾಗೂ ಹಾಲಿ ಸಹೋದ್ಯೋಗಿಯೂ ಆಗಿದ್ದರು.