Sunday, 15th December 2024

ನೇಪಾಳದಲ್ಲಿ ಭಾರಿ ಮಳೆ, ಮೇಘಸ್ಫೋಟ: ಏಳು ಮಂದಿ ಸಾವು

ಕಠ್ಮಂಡು: ನೇಪಾಳದಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಮೇಘಸ್ಫೋಟ ದಿಂದ ದಿಢೀರ್ ಪ್ರವಾಹ ಉಂಟಾಗಿದ್ದು, ಈ  ದುರಂತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಕೇಂದ್ರ ನೇಪಾಳದ ಸಿಂಧುಪಾಲಚೋಕ್ ಪ್ರಾಂತ್ಯದಲ್ಲಿ ಪ್ರವಾಹ ಸಂಭವಿ ಸಿದ್ದು, ಮೇಲಮ್ಚಿ ಟೌನ್ ನಲ್ಲಿ 200 ಮನೆಗಳು ಪ್ರವಾಹಕ್ಕೆ ಆಹುತಿಯಾಗಿದೆ.

ಬುಧವಾರ ತಡರಾತ್ರಿ 7 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಕನಿಷ್ಠ 50 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಎಲ್ಲರೂ ಇದೇ ಮೇಲಮ್ಚಿ ಕುಡಿಯುವ ನೀರು ಯೋಜನೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಎಂದು ತಿಳಿದು ಬಂದಿದೆ. ಮೆಲಮ್ಚಿ ಮತ್ತು ಇಂದ್ರಾವತಿ ನದಿಗಳ ಪ್ರವಾಹದಲ್ಲಿ 50 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.