Sunday, 8th September 2024

ಶ್ರೀಲಂಕಾದಲ್ಲಿ ಭಾರೀ ಮಳೆಗೆ 14 ಮಂದಿ ಸಾವು

ಕೊಲಂಬೊ: ಭಾರಿ ಮಳೆಯಿಂದಾಗಿ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ 14 ಮಂದಿ ಮೃತಪಟ್ಟು, 2,45,000 ಜನರು ಹಾನಿಗೊಳ ಗಾಗಿದ್ದಾರೆ ಎಂದು ಎಂದು ವರದಿಯಾಗಿದೆ.

ಮೃತರಲ್ಲಿ ಐದು ಮಂದಿ ಸಾವು ಕೆಗಲ್ಲೆಯಿಂದ ವರದಿಯಾಗಿದ್ದರೆ, ಮೂರು ಸಾವುಗಳು ರತ್ನಪುರ ಜಿಲ್ಲೆಯಿಂದ ವರದಿಯಾಗಿದೆ. ಇಬ್ಬರು ನಾಪತ್ತೆಯಾಗಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. 15,658 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, 800 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಶ್ರೀಲಂಕಾದ ಹವಾಮಾನ ಇಲಾಖೆ ವರದಿಯಲ್ಲಿ, ಮುಂಬರುವ ದಿನಗಳಲ್ಲಿ 150 ಮಿಮೀ ಭಾರೀ ಮಳೆ ನಿರೀಕ್ಷಿಸಬಹುದು. ವಿಶೇಷವಾಗಿ ಭಾರೀ ಗುಡುಗು ಮಿಂಚಿನಿಂದ ಜಾಗರೂಕರಾಗಿರಿ ಎಂದು ಸಾರ್ವಜನಿಕರನ್ನು ಕೋರಲಾಗಿತ್ತು.

ಪ್ರತಿಕೂಲ ಹವಾಮಾನದಿಂದಾಗಿ, ಕೋವಿಡ್-19 ನಲ್ಲಿನ ವ್ಯಾಕ್ಸಿನೇಷನ್ ಕಾರ್ಯಕ್ರಮವು ಸಹ ಹಿನ್ನಡೆ ಅನುಭವಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಜಿಲ್ಲೆಗಳಲ್ಲಿ ಲಸಿಕೆ ಹಾಕುವಿಕೆಯನ್ನು ಸ್ಥಗಿತಗೊಳಿಸಲಾಗಿಲ್ಲವಾದರೂ, ಭಾರಿ ಮಳೆ ಯಿಂದಾಗಿ ಅಧಿಕಾರಿಗಳು ತಮ್ಮ ಶೇಕಡಾ 100 ರಷ್ಟು ಕಾರ್ಯ ನಿರ್ವಹಿಸಲು ಸಾಧ್ಯವಾಗಲಿಲ್ಲ.

Leave a Reply

Your email address will not be published. Required fields are marked *

error: Content is protected !!