Saturday, 7th September 2024

ಡೆನ್ವರ್‌ನಲ್ಲಿ ಹಿಮಚ್ಛಾದಿತ ಬಿರುಗಾಳಿ: 2,000 ವಿಮಾನಗಳ ಹಾರಾಟ ರದ್ದು

ಡೆನ್ವರ್‌(ಅಮೆರಿಕ): ಹಿಮದಿಂದ ಕೂಡಿದ ಬಿರುಗಾಳಿ ಬೀಸುತ್ತಿರುವುದರಿಂದ ಡೆನ್ವರ್‌ನಲ್ಲಿ ವಾರಾಂತ್ಯದಲ್ಲಿ 2,000 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಶನಿವಾರ ಮಧ್ಯಾಹ್ನದಿಂದ ಭಾನುವಾರ ರಾತ್ರಿಯವರೆಗೆ ಡೆನ್ವರ್ ಮತ್ತು ಬೌಲ್ಡರ್‌ನಲ್ಲಿ 18 ರಿಂದ 24 ಇಂಚುಗಳಷ್ಟು (46-61 ಸೆಂ.ಮೀ) ಗಾತ್ರದ ಹಿಮ ಬೀಳುವ ಸಾಧ್ಯತೆಯಿದೆ’ ಎಂದು ಹೇಳಿದೆ. ‘ಇದರಿಂದ ರಸ್ತೆಗಳು ಮುಚ್ಚುವ ಸಾಧ್ಯತೆಗಳಿವೆ. ಹಾಗಾಗಿ ಜನರು ಅನಗತ್ಯ ಪ್ರವಾಸ ಮಾಡಬಾರದು’ ಎಂದು ಕೊಲೊರಾಡೋ ಸಾರಿಗೆ ಇಲಾಖೆ ಸೂಚಿಸಿದೆ.

ಹಿಮ ಬಿರುಗಾಳಿಯಿಂದಾಗಿ ಡೆನ್ವರ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಶನಿವಾರ 750 ವಿಮಾನ ಮತ್ತು ಭಾನುವಾರ 1,300 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ’ ಎಂದು ವಿಮಾನ ನಿಲ್ದಾಣದ ವಕ್ತಾರೆ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!