Thursday, 12th December 2024

Himba Tribe: ಹೆಂಡತಿಯನ್ನು ಅತಿಥಿಗಳ ಜತೆ ಮಲಗಲು ಕಳುಹಿಸುವುದೇ ಈ ಬುಡಕಟ್ಟು ಸಮುದಾಯದ ಶ್ರೇಷ್ಠ ಸಂಪ್ರದಾಯ

Himba Tribe

ಹಿಂಬಾ (Himba Tribe) ಸಮುದಾಯವು ನಮೀಬಿಯಾದ ಕೊನೆಯ ಅರೆ- ಅಲೆಮಾರಿ ಬುಡಕಟ್ಟು ಜನಾಂಗವೆಂದು ಪರಿಗಣಿಸಲಾಗಿದೆ. ಈ ಬುಡಕಟ್ಟು ಜನಾಂಗ ಸುಮಾರು 50,000 ಜನಸಂಖ್ಯೆ ಹೊಂದಿದೆ. ಅವರನ್ನು ಅರೆ ಅಲೆಮಾರಿ ಎಂದು ಕರೆಯಲಾಗುತ್ತದೆ. ಏಕೆಂದರೆ ಅವರು ತಮ್ಮದೇ ಆದ ಮನೆಗಳನ್ನು ಹೊಂದಿದ್ದರೂ ಮಳೆ ಅಥವಾ ನೀರಿನ ಸಮಸ್ಯೆಯಿಂದ ಬೇರೆ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಾರೆ. ಈ ಬುಡಕಟ್ಟು ಜನಾಂಗ ತನ್ನ ವಿಚಿತ್ರ ಸಂಪ್ರದಾಯಗಳಿಂದಾಗಿ ಭಾರೀ ಸುದ್ಧಿಯಲ್ಲಿದೆ. ಏನೆಂದರೆ, ಈ ಬುಡಕಟ್ಟು ಜನಾಂಗದ ಮಹಿಳೆಯರು ಮನೆಗೆ ಬಂದ ಅತಿಥಿಗಳ ಜೊತೆಗೆ ಲೈಂಗಿಕ ಸಂಬಂಧ ಮಾಡಿ ಸಂತೃಪ್ತಿ ಪಡಿಸಬೇಕು. ಇದಕ್ಕೆ ಅವರ ಗಂಡಂದಿರೇ ಅನುಮತಿ ನೀಡುತ್ತಾರೆ. ಯಾಕೆಂದರೆ ಇದು ಅವರ ಸಂಪ್ರದಾಯ!

Himba Tribe

ನಮೀಬಿಯಾದ ಮರುಭೂಮಿ ಪ್ರದೇಶಗಳಲ್ಲಿ ವಾಸಿಸುವ ಈ ಹಿಂಬಾ ಬುಡಕಟ್ಟು ಜನಾಂಗದವರು ತಮ್ಮ ವಿಶಿಷ್ಟವಾದ ವೈವಾಹಿಕ, ಸಂಪ್ರದಾಯದ ನಿಯಮಗಳಿಂದಾಗಿ ಜಗತ್ತಿನ ಬೇರೆ ಸಂಪ್ರದಾಯಗಳ ನಿಯಮಗಳಿಗಿಂತ ಭಿನ್ನರಾಗಿದ್ದಾರೆ. ಹಿಂಬಾ ಬುಡಕಟ್ಟು ಜನಾಂಗದ ಪುರುಷರಿಗೆ ಹೆಂಡತಿಯರನ್ನು ಲೈಂಗಿಕ ಕ್ರಿಯೆಗಾಗಿ ಅತಿಥಿಗಳ ಬಳಿಗೆ ಕಳುಹಿಸುವುದು ಅತಿಥಿಗಳಿಗೆ ನೀಡುವ ಗರಿಷ್ಠ ಆತಿಥ್ಯದ ಎಂದು ಪರಿಗಣಿಸಲಾಗಿದೆ. ಇದನ್ನು ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುವ ಮಾರ್ಗವೆಂದು  ಪರಿಗಣಿಸಲಾಗಿದೆ.

ವರದಿಗಳ ಪ್ರಕಾರ, ಹಿಂಬಾ ಬುಡಕಟ್ಟು ಜನಾಂಗದ ಮಹಿಳೆಯರು ತುಂಬಾ ಶ್ರಮಜೀವಿಗಳು. ಅವರು ಬುಡಕಟ್ಟು ಜನಾಂಗದ ಪುರುಷರಿಗಿಂತ ಹೆಚ್ಚಿನ ಕೆಲಸವನ್ನು ಮಾಡುತ್ತಾರೆ. ಮಹಿಳೆಯರು ಪ್ರತಿದಿನ ಪ್ರಾಣಿಗಳು ಮತ್ತು ಮನೆಗಳನ್ನು ನೋಡಿಕೊಳ್ಳುವುದು ಮತ್ತು ಅಡುಗೆ, ಮನೆ ಸ್ವಚ್ಛಗೊಳಿಸುವುದು ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಮುಂತಾದ ಮನೆಕೆಲಸಗಳನ್ನು ಮಾಡುತ್ತಾರೆ.

ಹಿಂಬಾ ಜನರ ಜೀವನಶೈಲಿ ಹೆಚ್ಚಾಗಿ ನಮೀಬಿಯಾದ ಸಮುದಾಯದಿಂದ ಪ್ರತ್ಯೇಕವಾಗಿದೆ. ಒಂದು ಅಂದಾಜಿನ ಪ್ರಕಾರ 50,000 ಹಿಂಬಾ ಬುಡಕಟ್ಟು ಜನರು ಇಲ್ಲಿ ವಾಸಿಸುತ್ತಿದ್ದಾರೆ. ಅವರು ತಮ್ಮ ಸಾಂಪ್ರದಾಯಿಕ ಅಸ್ತಿತ್ವವನ್ನು ಇಂದಿಗೂ ಜೀವಂತವಾಗಿರಿಸಿಕೊಂಡಿದ್ದಾರೆ. ಇದು ಮಾತ್ರವಲ್ಲ, ಹಿಂಬಾ ಬುಡಕಟ್ಟು ಜನಾಂಗದ ಪುರುಷರು ಒಂದಕ್ಕಿಂತ ಹೆಚ್ಚು ಹೆಂಡತಿಯರನ್ನು ಹೊಂದಿರುತ್ತಾರೆ.

ಹಿಂಬಾ ಮಹಿಳೆಯರಿಗೆ ವಿಚ್ಛೇದನ ಪಡೆಯುವುದು ತುಂಬಾ ಸುಲಭ ಎಂದು ಹೇಳಲಾಗುತ್ತದೆ. ಈ ಬುಡಕಟ್ಟು ಜನಾಂಗದಲ್ಲಿ, ಮದುವೆ ಅಥವಾ ವಿವಾಹೇತರ ಸಂಬಂಧಗಳು, ಬೇರೆಯವರಿಂದ ಮಗು ಪಡೆಯುವುದು ಒಂದು ದೊಡ್ಡ ವಿಷಯವೆಂದು ಪರಿಗಣಿಸಲಾಗುವುದಿಲ್ಲ.

ಇದನ್ನೂ ಓದಿ:ಬೈಕ್ ಸವಾರನನ್ನು ಬೆನ್ನಟ್ಟಿ ಕೊಂದ ಘೇಂಡಾಮೃಗ; ಭಯ ಹುಟ್ಟಿಸುವ ವಿಡಿಯೊ

ಹಿಂಬಾ ಬುಡಕಟ್ಟು ಜನಾಂಗದವರು ಹೆಂಡತಿಯನ್ನು ಬದಲಾಯಿಸುವ ಸಂಪ್ರದಾಯವನ್ನು ಸಹ ಹೊಂದಿದ್ದಾರೆ. ಇದು ಶತಮಾನಗಳಿಂದ ನಡೆಯುತ್ತಿದೆ. ಇದರ ಅಡಿಯಲ್ಲಿ, ಇಲ್ಲಿನ ಪುರುಷರು ತಮ್ಮ ಹೆಂಡತಿಯರಿಗೆ ಅಪರಿಚಿತ ಪುರುಷರೊಂದಿಗೆ ರಾತ್ರಿ ಮಲಗಲು ಅವಕಾಶ ನೀಡಿ ತಾವು ಮತ್ತೊಂದು ಕೋಣೆಯಲ್ಲಿ ಮಲಗುತ್ತಾರೆ. ಆದರೆ ಈಗ, ಈ ಬುಡಕಟ್ಟು ಜನಾಂಗದ ಜೀವನಶೈಲಿ ನಿಧಾನವಾಗಿ ಬದಲಾಗುತ್ತಿದೆ. ಯಾಕೆಂದರೆ ಪಾಶ್ಚಿಮಾತ್ಯ ದೇಶಗಳ ಜೀವನಶೈಲಿ ನಮೀಬಿಯಾದಲ್ಲಿ ಹರಡುತ್ತಿರುವುದರಿಂದ, ಹಿಂಬಾ ಬುಡಕಟ್ಟು ಜನಾಂಗದ ಮಕ್ಕಳು ತಮ್ಮ ಸಂಪ್ರದಾಯದ ಬಗ್ಗೆ ನಾಚಿಕೆಪಡುತ್ತಿದ್ದಾರೆ. ಈ ಸಂಪ್ರದಾಯವನ್ನು ಪಾಲಿಸಲು ಹಿಂದೇಟು ಹಾಕುತ್ತಿದ್ದಾರೆ.