Saturday, 14th December 2024

ಮುಸ್ಲಿಂ ವ್ಯಕ್ತಿಯ ಜತೆ ಹಿಂದು ಹುಡುಗಿ ವಿವಾಹ: ಪ್ರತಿಭಟನೆ

ಲಾಹೋರ್​: ಪಾಕಿಸ್ತಾನದಲ್ಲಿ ಹಿಂದುಗಳು ಮೇಲಿನ ದೌರ್ಜನ್ಯಕ್ಕೆ ಕೊನೆ ಎಂಬುದಿಲ್ಲವೆ?

16 ವರ್ಷದ ಹಿಂದು ಹುಡುಗಿಯನ್ನು ಅಪಹರಿಸಿ, ಬಲವಂತವಾಗಿ ಮುಸ್ಲಿಂ ವ್ಯಕ್ತಿಯ ಜತೆ ಮದುವೆ ಮಾಡಿರುವ ಘಟನೆ ಪಾಕಿಸ್ತಾನದ ಸಿಂಧ್​ ಪ್ರಾಂತ್ಯದಿಂದ ವರದಿಯಾಗಿದೆ.

ಈ ಘಟನೆ ಬೆನ್ನಲ್ಲೇ ಹಿಂದು ಸಮುದಾಯವು ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್​ ಅಲಿ ಜರ್ದಾರಿ ಮನೆಯ ಮುಂದೆ ಪ್ರತಿಭಟನೆ ನಡೆಸಿ, ನೆರವು ನೀಡುವಂತೆ ಕೋರಿದ್ದಾರೆ.

ಈ ಬಗ್ಗೆ ಈಗಾಗಲೇ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಭಾರತೀಯ ಪ್ರತಿನಿಧಿ ಧ್ವನಿ ಎತ್ತಿದ್ದಾರೆ.

‘ಪಾಕಿಸ್ತಾನದಲ್ಲಿ ಸಾವಿರಾರು ಸಿಖ್ಖರು, ಹಿಂದುಗಳು ಮತ್ತು ಕ್ರೈಸ್ತ ಅಲ್ಪಸಂಖ್ಯಾತ ಮಹಿಳೆ ಯರು ಹಾಗೂ ಹುಡುಗಿಯರು ಅಪಹರಣಕ್ಕೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.