Thursday, 3rd October 2024

Horseshoe Crab: ಈ ಏಡಿಯ 1 ಲೀಟರ್ ರಕ್ತದ ಬೆಲೆ 12.58 ಲಕ್ಷ ರೂ!

Horseshoe Crab

ಸುಮಾರು 450 ಮಿಲಿಯನ್ ವರ್ಷಗಳಿಂದ ಭೂಮಿಯ ಮೇಲಿರುವ ಹಾರ್ಸ್‌ಶೂ ಏಡಿ (Horseshoe Crab) ಬೆಳೆದ ಆಧುನಿಕ ತಂತ್ರಜ್ಞಾನಗಳಿಂದಾಗಿ ಬೆದರಿಕೆಯನ್ನು ಎದುರಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಅದರ ರಕ್ತ. ಹಾರ್ಸ್‌ಶೂ ಏಡಿಯ ರಕ್ತ ವಿಶ್ವದಲ್ಲೇ ಅತ್ಯಂತ ದುಬಾರಿ ದ್ರವಗಳಲ್ಲಿ ಒಂದಾಗಿದೆ. ಇದರ ರಕ್ತದ ಪ್ರತಿ ಲೀಟರ್‌ಗೆ ಸುಮಾರು 12.58 ಲಕ್ಷ ರೂ. ಇದೆ!

1960 ರ ದಶಕದಲ್ಲಿ ವಿಜ್ಞಾನಿಗಳು ಹಾರ್ಸ್‌ಶೂ ಏಡಿಯ ರಕ್ತವನ್ನು ಸಣ್ಣ ಪ್ರಮಾಣದ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಪತ್ತೆ ಹಚ್ಚಲು ಬಳಸಬಹುದು ಎಂದು ಪತ್ತೆ ಹಚ್ಚಿದರು. ಬಳಿಕ ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು ಚುಚ್ಚುಮದ್ದು, ಲಸಿಕೆ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಸಾಧನಗಳು ಮಾಲಿನ್ಯದಿಂದ ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಬಳಸಲಾಗುತ್ತಿದೆ.

Horseshoe Crab

ಅಮೆರಿಕದ ಈಸ್ಟ್ ಕೋಸ್ಟ್‌ನಲ್ಲಿ ಪ್ರತಿ ವರ್ಷ 5,00,000 ಏಡಿಗಳನ್ನು ಸಂಗ್ರಹಿಸಿ, ಸ್ವಚ್ಛಗೊಳಿಸಲಾಗುತ್ತದೆ. ಅನಂತರ ಅದರ ಮೂರನೇ ಒಂದು ಭಾಗದಷ್ಟು ರಕ್ತವನ್ನು ತೆಗೆಯಲಾಗುತ್ತದೆ. ಮೆಕ್ಸಿಕೋ ಮತ್ತು ಚೀನಾದ ಪೂರ್ವ ತೀರದಲ್ಲಿ ಇದನ್ನು ಹೆಚ್ಚಾಗಿ ಸಂಗ್ರಹ ಮಾಡಲಾಗುತ್ತದೆ. ಇದರ ರಕ್ತಕ್ಕೆ ಹೆಚ್ಚಿನ ಬೇಡಿಕೆಯಿದೆ. ಈ ಏಡಿಗಳ ರಕ್ತದ ಬಣ್ಣ ನೀಲಿಯಾಗಿದ್ದು, ಹೀಗಾಗಿ ಇದನ್ನು ನೀಲಿ ಚಿನ್ನ ಎಂದು ಕರೆಯಲಾಗುತ್ತದೆ. ರಕ್ತ ತೆಗೆದ ಬಳಿಕ ಈ ಏಡಿಗಳನ್ನು ಮತ್ತೆ ಸಾಗರಕ್ಕೆ ಬಿಡುಗಡೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯ ಪರಿಣಾಮವಾಗಿ ಶೇ.15ರಷ್ಟು ಏಡಿಗಳು ಸಾಯುತ್ತವೆ ಎಂದು ಅಂದಾಜಿಸಲಾಗಿದೆ.

Unique Tradition: ಇಲ್ಲಿನ ಗಂಡಸರಿಗೆ ಎರಡು ಮದುವೆ ಕಡ್ಡಾಯ; ಇದರ ಹಿಂದಿದೆ ವಿಚಿತ್ರ ಕಾರಣ!

ಅಲ್ಲದೇ ಇವುಗಳ ಬಳಕೆ, ಆವಾಸಸ್ಥಾನದ ನಷ್ಟ ಮತ್ತು ಹವಾಮಾನ ಬಿಕ್ಕಟ್ಟಿನ ಕಾರಣದಿಂದ ಕಳೆದ 40 ವರ್ಷಗಳಲ್ಲಿ ಈ ಏಡಿಗಳ ಸಂಖ್ಯೆಯು ಶೇ. 80ರಷ್ಟು ಕುಸಿದಿದೆ ಎಂದು ಅಂದಾಜಿಸಲಾಗಿದೆ.