ವಾಷಿಂಗ್ಟನ್: ಭಾರತೀಯ ರಾಯಭಾರ ಕಚೇರಿಯ (US Indian embassy) ಅಧಿಕಾರಿಯೊಬ್ಬರು ವಾಷಿಂಗ್ಟನ್ನಲ್ಲಿರುವ ಕಚೇರಿ ಆವರಣದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಭಾರತೀಯ ರಾಯಭಾರ ಕಚೇರಿಯ ಹೇಳಿಕೆಯ ಪ್ರಕಾರ, ಈ ಘಟನೆ ಸೆಪ್ಟೆಂಬರ್ 18 ರ ಬುಧವಾರ ನಡೆದಿದ್ದು ಪ್ರಸ್ತುತ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಯಭಾರ ಕಚೇರಿಯ ಅಧಿಕಾರಿಯ ಸಾವಿನ ತನಿಖೆಯು ಆತ್ಮಹತ್ಯೆಯ ಸಾಧ್ಯತೆ ಸೇರಿದಂತೆ ಎಲ್ಲಾ ಕೋನಗಳನ್ನು ಒಳಗೊಂಡಿದೆ ಎಂದು ಭಾರತೀಯ ರಾಯಭಾರ ಕಚೇರಿಯ ಹೇಳಿಕೆ ತಿಳಿಸಿದೆ.
Indian 🇮🇳 Embassy official found dead at Washington DC office, Investigations underway.
— Resonant News🌍 (@Resonant_News) September 21, 2024
Indian Embassy official found dead at the Washington DC office has been identified as 'Rajesh Verma' a seasoned diplomat with over 20 years of experience in international relations. Verma was… pic.twitter.com/s2HuXIfr7y
ಭಾರತೀಯ ರಾಯಭಾರ ಕಚೇರಿಯ ಸದಸ್ಯರೊಬ್ಬರು 2024 ರ ಸೆಪ್ಟೆಂಬರ್ 18 ರ ಸಂಜೆ ನಿಧನಹೊಂದಿದ್ದಾರೆ ನಾವು ತಿಳಿಸಲು ಬಯಸುತ್ತೇವೆ. ಮೃತ ದೇಹವನ್ನು ಭಾರತಕ್ಕೆ ತ್ವರಿತವಾಗಿ ವರ್ಗಾಯಿಸುವುದಕ್ಕಾಗಿ ನಾವು ಎಲ್ಲಾ ಏಜೆನ್ಸಿಗಳು ಮತ್ತು ಕುಟುಂಬದ ಸದಸ್ಯರೊಂದಿಗೆ ಸಂಪರ್ಕ ಸಾಧಿಸಿದ್ದೇವೆ ಎಂದು ಭಾರತೀಯ ರಾಯಭಾರ ಕಚೇರಿ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
ಮೃತರ ಕುಟುಂಬದ ಗೌಪ್ಯತೆ ಕಾಪಾಡಿಕೊಳ್ಳುವ ಕಾರಣಕ್ಕೆ ಮೃತರ ಬಗ್ಗೆ ಹೆಚ್ಚುವರಿ ವಿವರಗಳನ್ನು ಬಿಡುಗಡೆ ಮಾಡಲಾಗುತ್ತಿಲ್ಲ. ಈ ದುಃಖದ ಸಮಯದಲ್ಲಿ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಕುಟುಂಬದೊಂದಿಗೆ ಇವೆ” ಎಂದು ಅದು ಹೆಚ್ಚಿನ ವಿವರಗಳನ್ನು ನೀಡದೆ ಹೇಳಿದೆ.