Sunday, 15th December 2024

ಐಸಿಇ ನಿರ್ದೇಶಕ ಹುದ್ದೆಗೆ ಜೊನಾಥನ್ ಫಹೆ ರಾಜೀನಾಮೆ

ಸ್ಯಾನ್ ಡಿಯಾಗೊ: ಅಮೆರಿಕದ ವಲಸೆ ಮತ್ತು ಸೀಮಾಸುಂಕ ಜಾರಿ ಏಜೆನ್ಸಿಯ ಪ್ರಭಾರಿ ನಿರ್ದೇಶಕ ಸ್ಥಾನಕ್ಕೆ ಜೊನಾಥನ್ ಫಹೆ ಅವರು ರಾಜೀನಾಮೆ ನೀಡಿದ್ದಾರೆ. ಕೆಲವು ವಾರಗಳ ಹಿಂದಷ್ಟೇ ಜೊನಾಥನ್ ನಿರ್ದೇಶಕ ಸ್ಥಾನವನ್ನು ವಹಿಸಿಕೊಂಡಿದ್ದರು.

ರಾಜೀನಾಮೆ ವಿಷಯವನ್ನು ಇಮೇಲ್ ಮೂಲಕ ಸಹೋದ್ಯೋಗಿಗಳಿಗೆ ತಿಳಿಸಿರುವ ಜೊನಾಥನ್, ಈ ಕುರಿತು ಯಾವುದೇ ವಿವರ ನೀಡಿಲ್ಲ.

ಜೊನಾಥನ್ ಅವರ ರಾಜೀನಾಮೆಯಿಂದ ತೆರವಾದ ಜಾಗಕ್ಕೆ ತಾಯೆ ಜಾನ್‌ಸರ್ ಅವರು ಏಜೆನ್ಸಿಯ ನಾಲ್ಕನೇ ಪ್ರಭಾರಿ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದಾರೆ.

ಅಕ್ರಮ ವಲಸಿಗರನ್ನು ಬಂಧಿಸಿ ಗಡಿಪಾರು ಮಾಡುವ ಮತ್ತು ಅಂತರರಾಷ್ಟ್ರೀಯ ಅಪರಾಧ ತನಿಖೆಗಳನ್ನು ನಡೆಸುವ ಐಸಿಇ ಏಜೆನ್ಸಿ ಅಮೆರಿಕದ ಹೋಮ್‌ ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಭಾಗವಾಗಿದೆ.