ಲಂಡನ್: ಮೈಕ್ರೋಸಾಫ್ಟ್ ನ ಇಂಟರ್ನೆಟ್ ಎಕ್ಸ್ ಪ್ಲೋರರ್ ಬ್ರೌಸರ್ ಜೂನ್ 15ರಿಂದ ಸ್ಥಗಿತಗೊಳ್ಳಲಿದೆ.
ಈ ಬ್ರೌಸರ್ 1995 ರಲ್ಲಿ ಬಳಕೆಗೆ ಬಂದಿತ್ತು. ವಿಂಡೋಸ್ 95 ಜೊತೆಗೆ ಬ್ರೌಸರ್ ಬಳಕೆಯಲ್ಲಿದ್ದು, ‘ಗೂಗಲ್’ ಬಳಕೆ ಹೆಚ್ಚಾಗು ತ್ತಿದ್ದಂತೆ ಇದರ ಜನಪ್ರಿಯತೆ ಕುಸಿತ ಕಂಡಿತ್ತು.
2003ರಲ್ಲಿ ಜಗತ್ತಿನ ಶೇ.93ರಷ್ಟು ಇಂಟರ್ನೆಟ್ ಬಳಕೆದಾರರು ಮೈಕ್ರೋಸಾಫ್ಟ್ ನ ಇಂಟರ್ನೆಟ್ ಎಕ್ಸ್ ಪ್ಲೋರರ್ ಬಳಸಿದ್ದು, ಆನಂತರ ಇತರೆ ಬ್ರೌಸರ್ ಗಳ ಬಳಕೆ ಏರಿಕೆಯಾಗಿತ್ತು. ಹೀಗಾಗಿ 2016ರಲ್ಲಿ ಮೈಕ್ರೋಸಾಫ್ಟ್ ‘ಎಡ್ಜ್’ ಎಂಬ ಹೊಸ ಬ್ರೌಸರ್ ಬಿಡುಗಡೆ ಮಾಡಿತ್ತು.
ಇಂಟರ್ನೆಟ್ ಎಕ್ಸ್ ಪ್ಲೋರರ್ ಜೂ.15ರಿಂದ ಸ್ಥಗಿತಗೊಳಿಸುವ ಕುರಿತಂತೆ ಮೈಕ್ರೋಸಾಫ್ಟ್ ಮಾಹಿತಿ ನೀಡಿದ ಬಳಿಕ ಇಂಟರ್ನೆಟ್ ಬಳಕೆದಾರರು ಇದಕ್ಕೆ ಭಾವಪೂರ್ಣ ವಿದಾಯ ಹೇಳುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಹಾಕುತ್ತಿದ್ದಾರೆ.