ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇಸ್ಲಾಮಾಬಾದ್ನ ಭಯೋತ್ಪಾದನಾ ವಿರೋಧಿ ನ್ಯಾಯಾ ಲಯದಿಂದ ಅನೇಕ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದಾರೆ. ಜೂನ್ 8 ರವರೆಗೆ ಜಾಮೀನು ನೀಡಲಾಗಿದೆ ಎಂದು ಅವರ ವಕೀಲ ಮೊಹಮ್ಮದ್ ಅಲಿ ಬೊಖಾರಿ ದೂರವಾಣಿಯಲ್ಲಿ ತಿಳಿಸಿದ್ದಾರೆ.
ನಂತರ ಖಾನ್ ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ನ್ಯಾಷನಲ್ ಅಕೌಂಟ ಬಿಲಿಟಿ ಬ್ಯೂರೋ ಮುಂದೆ ಹಾಜರಾಗಲಿದ್ದಾರೆ.
ಅವರನ್ನು ಮತ್ತೆ ಬಂಧಿಸುವ ಹೆಚ್ಚಿನ ಅವಕಾಶವಿದೆ ಎಂದು ಪ್ರತಿಪಕ್ಷದ ನಾಯಕ ವಿಚಾರಣೆಗೆ ಮುಂಚಿತವಾಗಿ ಎಚ್ಚರಿಕೆ ನೀಡಿದ್ದರು. ಆದರೆ ಅವರನ್ನು ವಶಕ್ಕೆ ತೆಗೆದುಕೊಂಡರೆ ಶಾಂತಿಯುತವಾಗಿರಲು ಅವರ ಬೆಂಬಲಿಗರಿಗೆ ಕರೆ ನೀಡಿದರು.