ಇಸ್ಲಾಮಾಬಾದ್: ಇಸ್ಲಾಮಾಬಾದ್‌ನ ಸ್ಥಳೀಯ ನ್ಯಾಯಾಲಯವು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಬುಶ್ರಾ ಬೀಬಿ ಅವರೊಂದಿಗಿನ ‘ಇಸ್ಲಾಮಿಕ್ ಅಲ್ಲದ’ ವಿವಾಹಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸೆ.25 ರಂದು ಸಮನ್ಸ್ ನೀಡಿದೆ.
ಸಿವಿಲ್ ನ್ಯಾಯಾಧೀಶ ಕುದ್ರತುಲ್ಲಾ ಅವರು ಅಟಾಕ್ ಜೈಲ್ ಸೂಪರಿಂಟೆಂಡೆಂಟ್‌ಗೆ ನೀಡಿದ ಆದೇಶದಲ್ಲಿ ಇಮ್ರಾನ್ ಖಾನ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ನಿರ್ದೇಶಿಸಿದ್ದಾರೆ. ಇಮ್ರಾನ್ ಖಾನ್ ತೋಷಖಾನಾ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಜೈಲಿನಲ್ಲಿದ್ದರು.
ಆಗಸ್ಟ್ 5 ರಂದು ಲಾಹೋರ್‌ನಲ್ಲಿರುವ ಇಮ್ರಾನ್ ಅವರ ಜಮಾನ್ ಪಾರ್ಕ್ ನಿವಾಸದಿಂದ ಅವರನ್ನು ಬಂಧಿಸಲಾಯಿತು. ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆಯಲ್ಲಿ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿ ಇಮ್ರಾನ್ ಅವರ ವಕೀಲರ ವಾದಗಳನ್ನು ಪರಿಶೀಲಿಸು ತ್ತಾರೆ.
ಇಮ್ರಾನ್ ಖಾನ್ ಅವರು ಇದ್ದತ್ ಸಮಯದಲ್ಲಿ ಮೂರನೇ ಪತ್ನಿಯನ್ನು ವಿವಾಹವಾದ ಆರೋಪ ಎದುರಿಸು ತ್ತಿದ್ದಾರೆ ಎಂದು ವರದಿ ತಿಳಿಸಿದೆ. ಇದ್ದತ್ ಎಂಬುದು ಇಸ್ಲಾಮಿಕ್ ಪರಿಭಾಷೆಯಾಗಿದ್ದು, ವಿಚ್ಛೇದನ ಪಡೆದ ನಂತರ ಅಥವಾ ಅವಳ ಗಂಡನ ಮರಣದ ನಂತರ ಬೇರೊಬ್ಬರನ್ನು ಮದುವೆಯಾಗುವ ಮೊದಲು ಮಹಿಳೆಗಾಗಿ ಕಾಯುವ ನಿರ್ದಿಷ್ಟ ಅವಧಿ ಎಂದು ಪರಿಗಣಿಸ ಲಾಗುತ್ತದೆ.