Thursday, 19th September 2024

India Pakistan Hockey : ಮೈದಾನದಲ್ಲೇ ಬಡಿದಾಡಿಕೊಂಡ ಭಾರತ- ಪಾಕಿಸ್ತಾನ ಹಾಕಿ ತಂಡದ ಆಟಗಾರರು

India Pakistan hockey

ನವದೆಹಲಿ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2024 ರಲ್ಲಿ (Champions Trophy 202) ಭಾರತ ಪುರುಷರ ಹಾಕಿ ತಂಡ (India Pakistan Hockey) ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರಿಸಿತ್ತು. ಶನಿವಾರ ನಡೆದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 2-1 ಗೋಲುಗಳಿಂದ ಮಣಿಸಿತು. ಈ ಗೆಲುವಿಗೆ ತನ್ನ ಹಿಂದಿನ ಪಂದ್ಯಗಳಿಗಿಂತ ಹೆಚ್ಚು ಶ್ರಮಿಸಬೇಕಾಯಿತು. ಆರು ತಂಡಗಳ ರೌಂಡ್ ರಾಬಿನ್ ಸ್ಪರ್ಧೆಯಲ್ಲಿ ಇದು ಭಾರತದ ಸತತ ಐದನೇ ಗೆಲುವಾಗಿದೆ. ಆದಾಗ್ಯೂ ಎರಡನೂ ತಂಡಗಳು ಮುಖಾಮುಖಿಯಾಗುತ್ತಿದ್ದಂತೆ ಉದ್ವಿಗ್ನತೆ ಹೆಚ್ಚಾಯಿತು. ಇದು ಎರಡೂ ತಂಡಗಳ ಆಡಗಾರರ ನಡುವಿನ ಘರ್ಷಣೆಗೆ ಕಾರಣವಾಯಿತು.

ಅಹ್ಮದ್ ನದೀಮ್ (8ನೇ ನಿಮಿಷ) ಗಳಿಸಿದ ಗೋಲಿನಿಂದ ಪಾಕಿಸ್ತಾನ ಮುನ್ನಡೆ ಸಾಧಿಸಿದರೆ, ಹರ್ಮನ್ ಪ್ರೀತ್ (13 ಮತ್ತು 19ನೇ ನಿಮಿಷ) ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪರಿವರ್ತಿಸಿ ಭಾರತಕ್ಕೆ ಜಯ ತಂದುಕೊಟ್ಟರು. ಈ ಟೂರ್ನಿಯಲ್ಲಿ ಪಾಕಿಸ್ತಾನಕ್ಕೆ ಇದು ಮೊದಲ ಸೋಲು. ಪಂದ್ಯದ ಬಹುಭಾಗ ಭಾರತ ಮುನ್ನಡೆ ಕಾಯ್ದುಕೊಂಡರೂ, ಅಂತಿಮ ಕ್ವಾರ್ಟರ್‌ನಲ್ಲಿ ಪಾಕಿಸ್ತಾನ ತಂಡವನ್ನು ಭಾರತ ತನ್ನ ಹಿಡಿತಕ್ಕೆ ತೆಗೆದುಕೊಂಡಿತು.

ಆರಂಭದಲ್ಲಿ ಭಾರತೀಯರು ಪ್ರಾಬಲ್ಯ ಸಾಧಿಸಲು ಪ್ರಾರಂಭಿಸಿದರು. ಆದರೆ ಪಂದ್ಯವು ಮುಂದುವರಿದಂತೆ ಪಾಕಿಸ್ತಾನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು. ಮಿಡ್‌ಫೀಲ್ಡ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹನ್ನಾನ್ ಶಾಹಿದ್ ಭಾರತದ ಡಿಫೆನ್ಸ್ ವಿಭಾಗವನ್ನು ಭೇದಿಸಿದರು. ನದೀಮ್ ಚೆಂಡನ್ನು ಭಾರತೀಯ ಗೋಲ್‌ಪೋಸ್ಟ್‌ಗೆ ನುಗ್ಗಿಸಿದರು

13ನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಪಾಕಿಸ್ತಾನದ ಗೋಲ್ ಕೀಪರ್ ಮುನ್ನೆಬ್ ಅವರ ಎಡಕ್ಕೆ ನಾಯಕ ಹರ್ಮನ್ ಪ್ರೀತ್ ಬಲವಾದ ಡ್ರ್ಯಾಗ್ ಫ್ಲಿಕ್ ಮಾಡಿ ಗೋಲ್ ಗಳಿಸಿದರು. 19ನೇ ನಿಮಿಷದಲ್ಲಿ ಎರಡನೇ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಭಾರತ 2-1ರ ಮುನ್ನಡೆ ಸಾಧಿಸಿತು.

ಎರಡನೇ ಕ್ವಾರ್ಟರ್‌ನಲ್ಲಿ ಭಾರತವು ಹೆಚ್ಚು ಪ್ರಭಾವ ಹೊಂದಿದ್ದರೂ ಪಾಕಿಸ್ತಾನವು ಕೆಲವು ಸಂದರ್ಭಗಳಲ್ಲಿ ಉತ್ತಮ ಅವಕಾಶಗಳನ್ನು ಪಡೆದುಕೊಂಡಿತು. ಪಂದ್ಯ ಮುಗಿಯಲು ಕೇವಲ 45 ಸೆಕೆಂಡುಗಳು ಬಾಕಿ ಇರುವಾಗ ಪಾಕಿಸ್ತಾನಕ್ಕೆ ಪೆನಾಲ್ಟಿ ಕಾರ್ನರ್ ಮೂಲಕ ಸಮಬಲ ಸಾಧಿಸುವ ಅವಕಾಶವಿತ್ತು, ಆದರೆ ಸುಫ್ಯಾನ್ ಖಾನ್ ಅವಕಾಶವನ್ನು ವ್ಯರ್ಥ ಮಾಡಿದರು. ಅದಕ್ಕಿಂತ ಮೊದಲು 37ನೇ ನಿಮಿಷದಲ್ಲಿ ಭಾರತ ಮೂರನೇ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕವರೂ ಪಾಕಿಸ್ತಾನ ತಡೆಯಿತು.

ಈ ಎಲ್ಲ ಪೈಪೋಟಿ ನಡುವೆ ಭಾರತ ಹಾಗೂ ಪಾಕಿಸ್ತಾನದ ಆಟಗಾರರು ಪರಸ್ಪರ ಕೈಮಿಲಾಯಿಸಿದ ಘಟನೆಯೂ ನಡಯಿತು. ಹರ್ಮನ್ ಪ್ರೀತ್ ಸಿಂಗ್ ಮತ್ತು ಪಾಕಿಸ್ತಾನದ ಅಶ್ರಫ್ ವಹೀದ್ ರಾಣಾ ನಡುವೆ ಜಗಳ ಆರಂಭವಾಯಿತು. ಜುಗ್ರಾಜ್ ಸಿಂಗ್‌ ಕೂಡ ಅದಕ್ಕೆ ಸಾಥ್ ಕೊಟ್ಟರು. ಅದಕ್ಕೆ ಕಾರಣ ಪಾಕಿಸ್ತಾನದ ಆಟಗಾರರು. ಜುಗ್ರಾಜ್‌ ಅವರಿಗೆ ತಾಗಿದ ಪಾಕ್ ಆಟಗಾರ ಅವರು ನೆಲಕ್ಕೆ ಬೀಳುವಂತೆ ಮಾಡಿದರು. ಅವರು ನೋವು ಅನುಭವಿಸಿದರು. ಹರ್ಮನ್ ಪ್ರೀತ್ ಸಿಂಗ್ ಮತ್ತು ಜರ್ಮನ್ ಪ್ರೀತ್ ಸಿಂಗ್ ಪಾಕ್ ಆಟಗಾರರಿಗೆ ಪಾಠ ಕಲಿಸಲು ಮುಂದಾದರು.

ಇದನ್ನೂ ಓದಿ: Mohammed Shami : ಮೊಹಮ್ಮದ್ ಶಮಿ ಭಾರತ ತಂಡಕ್ಕೆ ಮರಳುವುದು ಯಾವಾಗ? ಇಲ್ಲಿದೆ ಹೊಸ ಅಪ್ಡೇಟ್‌

ಆನ್ ಫೀಲ್ಡ್ ಅಂಪೈರ್ ಗಳು ಮತ್ತು ಪಾಕಿಸ್ತಾನ ನಾಯಕ ಅಮ್ಮದ್ ಬಟ್ ಮತ್ತು ಎರಡೂ ತಂಡಗಳ ಇತರ ಆಟಗಾರರು ಪರಿಸ್ಥಿತಿಯನ್ನು ನಿಯಂತ್ರಿಸಿದರು ರಾಣಾ ಹಳದಿ ಕಾರ್ಡ್ ಸಿಕ್ಕಿತು. 10 ನಿಮಿಷಗಳ ಕಾಲ ಅವರು ಅಮಾನತಗೊಂಡರು.

Leave a Reply

Your email address will not be published. Required fields are marked *