Sunday, 15th December 2024

ಕಾರು-ಬಸ್ ಮುಖಾಮುಖಿ ಡಿಕ್ಕಿ: ಭಾರತೀಯ ಪ್ರವಾಸಿಗರ ಸಾವು

ಕಾಠ್ಮಂಡು: ನೇಪಾಳದ ದಾದಿಂಗ್ ಜಿಲ್ಲೆಯಲ್ಲಿ ಕಾರು ಹಾಗೂ ಬಸ್ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಭಾರತೀಯ ಪ್ರವಾಸಿಗರೂ ಸೇರಿ ಐವರು ಮೃತಪಟ್ಟಿದ್ದಾರೆ.

ಮೃತರನ್ನು ಉತ್ತರ ಪ್ರದೇಶದ ಬೀಮಲ್ ಚಂದ್ರ ಅಗರವಾಲ್, ಸಾಧನಾ ಅಗರವಾಲ್ ಸಂದ್ಯಾ ಅಗರವಾಲ್ ಹಾಗೂ ರಾಕೇಶ್ ಅಗರವಾಲ್ ಎಂದು ಗುರುತಿಸಲಾಗಿದೆ‌. ಮೃತರು ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ.

ಕಾಠ್ಮಂಡುವಿನಿಂದ 200 ಕಿಮೀ ದೂರ ಇರುವ ಪೋಕಹರಾ ವಿಜ್ಞಾನ ನಗರದ ದರ್ಶನ ಮುಗಿಸಿಕೊಂಡು ಅಗರವಾಲ್ ಕುಟುಂಬ ವಾಪಸ್ ಕಠ್ಮಂಡುವಿಗೆ ಬರುವಾಗ ಪೃಥ್ವಿ ಹೆದ್ದಾರಿಯ ತಾಕರೆ ಎಂಬ ಪ್ರದೇಶದಲ್ಲಿ ಬಸ್ ಕಾರ್ ಮುಖಾಮುಖಿ ಸಂಭವಿಸಿದೆ.

ಘಟನೆಯಲ್ಲಿ ನೇಪಾಳದ ಬಸ್ ಚಾಲಕ ದಿಲ್ ಬಹದ್ದೂರ ಬಾಸನೇತ್ ಕೂಡ ಮೃತ ಪಟ್ಟಿದ್ದಾರೆ‌.