Thursday, 19th September 2024

ಯುಎಸ್ ನೂತನ ಅಧ್ಯಕ್ಷ ಬೈಡೆನ್‌ ಅಧ್ಯಕ್ಷೀಯ ಭಾಷಣ ಬರೆದವರು ಭಾರತೀಯ !

ವಾಷಿಂಗ್ಟನ್: ಬುಧವಾರ ರಾತ್ರಿ 10 ಗಂಟೆ(ಭಾರತೀಯ ಕಾಲಮಾನ) ಗೆ ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡೆನ್​ ಹಾಗೂ ಉಪಾಧ್ಯಕ್ಷರಾಗಿ ಭಾರತ ಮೂಲದ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕರಿಸಲಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಕ್ಯಾಪಿಟಲ್ ಹಿಲ್ಸ್​ನಲ್ಲಿ ಜೋ ಬೈಡನ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. 46ನೇ ಅಧ್ಯಕ್ಷರಾಗಿ ಜೋ ಬೈಡನ್ ಅವರು ಪ್ರಮಾಣ ವಚನ ಸ್ವೀಕರಿಸಿ ದೇಶವನ್ನುದ್ದೇಶಿಸಿ ಮಾಡಲಿರುವ ಭಾಷಣವನ್ನು ಆಲಿಸಲು ಅಮೆರಿಕದವರು ಮಾತ್ರವಲ್ಲದೇ, ಹಲವಾರು ದೇಶಗಳ ಜನರು ಕಾತರರಾಗಿ ಕಾಯುತ್ತಿ ದ್ದಾರೆ.

ಒಂದು ಹೆಮ್ಮೆಯ ವಿಷಯವೇನೆಂದರೆ ಅಧ್ಯಕ್ಷೀಯ ಭಾಷಣವನ್ನು ಬರೆದುಕೊಟ್ಟವರು ಭಾರತ ಮೂಲದ ವಿನಯ್ ರೆಡ್ಡಿ! ಅಮೆರಿಕದ ಸರ್ಜನ್ ಜನರಲ್ ಹುದ್ದೆಯಿಂದ ಹಿಡಿದು, ಭದ್ರತಾ ಮಂಡಳಿವರೆಗೂ ಭಾರತೀಯ ಮೂಲದವರನ್ನು ಜೋ ಬೈಡನ್ ತಮ್ಮ ಸಂಪುಟದಲ್ಲಿರಿಸಿಕೊಂಡಿದ್ದಾರೆ.

ಒಹಾಯೋದ ಡೇಟನ್​ನಲ್ಲಿ ಬೆಳೆದಿರುವ ವಿನಯ್ ರೆಡ್ಡಿ ಅವರು 2013 ರಿಂದ 2017ರ ಅವಧಿಯಲ್ಲಿ ಬೈಡೆನ್ ಉಪಾಧ್ಯಕ್ಷರಾಗಿ ದ್ದಲೂ ಭಾಷಣ ಬರೆದುಕೊಟ್ಟಿದ್ದರು, ಚುನಾವಣಾ ಪ್ರಚಾರದ ಸಂದರ್ಭದಲ್ಲೂ ವಿನಯ್ ಭಾಷಣ ಸಿದ್ಧಪಡಿಸಿದ್ದರು. ಅಧ್ಯಕ್ಷರ ಭಾಷಣ ಬರೆದು ಕೊಡುವ ಹುದ್ದೆಗೇರಿದ ಮೊದಲ ಭಾರತೀಯ ಮೂಲದ ಅಮೆರಿಕನ್ ಎನಿಸಿಕೊಂಡಿದ್ದಾರೆ ವಿನಯ್.

Leave a Reply

Your email address will not be published. Required fields are marked *