Thursday, 12th December 2024

ವ್ಯಾಂಕೋವರ್‌ನಲ್ಲಿ ಭಾರತೀಯ ವಿದ್ಯಾರ್ಥಿ ಹತ್ಯೆ

ವ್ಯಾಂಕೋವರ್: ವಿದೇಶಿ ವಿದ್ಯಾರ್ಥಿಗಳ ಸರಣಿ ಹತ್ಯೆಯ ನಡುವೆ ಕೆನಡಾದ ದಕ್ಷಿಣ ವ್ಯಾಂಕೋವರ್‌ನಲ್ಲಿ ಭಾರತದ ಮತ್ತೊಬ್ಬ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಮೃತ ವಿದ್ಯಾರ್ಥಿಯನ್ನು 24 ವರ್ಷದ ಚಿರಾಗ್ ಅಂತಿಲ್ ಎಂದು ಗುರುತಿಸಲಾಗಿದೆ.

ಗುಂಡಿನ ಸದ್ದು ಕೇಳಿಬಂದ ಬಗ್ಗೆ ಸ್ಥಳೀಯರು ನೆರೆಹೊರೆಯವರು ವರದಿ ಮಾಡಿದ ನಂತರ ಪರಿಶೀಲನೆ ನಡೆಸಲಾಗಿದೆ. ಚಿರಾಗ್ ಆ ಪ್ರದೇಶದಲ್ಲಿ ವಾಹನದೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಸದ್ಯಕ್ಕೆ, ಯಾರನ್ನೂ ಬಂಧಿಸಲಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೂರ್ವ 55ನೇ ಅವೆನ್ಯೂ ಮತ್ತು ಮುಖ್ಯ ಬೀದಿ ನಿವಾಸಿಗಳು ಗುಂಡೇಟಿನ ಶಬ್ದ ಕೇಳಿದ ಬಗ್ಗೆ ತಿಳಿಸಿದ ನಂತರ ಅಧಿಕಾರಿಗಳನ್ನು ಕಳಿಸಿ ಪರಿಶೀಲಿಸಲಾಗಿದೆ. ಚಿರಾಗ್ ಆಂಟಿಲ್ ವಾಹನದೊಳಗೆ ಸಾವನ್ನಪ್ಪಿರುವುದು ಕಂಡು ಬಂದಿದೆ.