Sunday, 15th December 2024

ಸೌದಿಯಲ್ಲಿ ಅಂತರರಾಷ್ಟ್ರೀಯ ವಿಮಾನ ಸೇವೆ ಸ್ಥಗಿತ

ದುಬೈ: ಸೌದಿ ಅರೇಬಿಯಾವು ಕೊರೊನಾ ಸೋಂಕಿನ ಹೊಸ ರೂಪಾಂತರ ಹರಡದಂತೆ ತಡೆಯಲು ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ವಿಮಾನ ಸೇವೆಯನ್ನು ಒಂದು ವಾರದ ತನಕ ಸ್ಥಗಿತಗೊಳಿಸಲಾಗಿದೆ. ವೈರಸ್‌ನ ಸ್ವರೂಪದ ಬಗ್ಗೆ ವೈದ್ಯಕೀಯ ಮಾಹಿತಿ ಲಭ್ಯ ವಾಗುವವರೆಗೂ ವಿಮಾನ ಸೇವೆಯ ಮೇಲಿನ ನಿರ್ಬಂಧ ಮುಂದುವರಿಸುವ ಸಾಧ್ಯತೆಯಿದೆ’ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯವು ತಿಳಿಸಿದೆ.

ಸೌದಿ ಅರೇಬಿಯಾವು ಭೂ ಮತ್ತು ಜಲ ಮಾರ್ಗಗಳನ್ನು ಒಂದು ವಾರದವರೆಗೆ ಮುಚ್ಚಿದೆ. ಆದರೆ ಸರಕು ಸಾಗಣೆ ವಿಮಾನ ಸೇವೆಗಳು ಎಂದಿನಂತೆ ಇರಲಿವೆ ಎಂದು ಸಚಿವಾಲಯವು ತಿಳಿಸಿದೆ.