Thursday, 12th December 2024

ಅಂತರರಾಷ್ಟ್ರೀಯ ಯೋಗ ದಿನ: ಪೂರ್ವಭಾವಿ ಕಾರ್ಯಕ್ರಮದಲ್ಲಿ 700 ಮಂದಿ ಭಾಗಿ

ಲಂಡನ್: ಅಂತರರಾಷ್ಟ್ರೀಯ ಯೋಗ ದಿನಕ್ಕೆ ಕೆಲ ದಿನಗಳು ಬಾಕಿ ಉಳಿದಿದ್ದು, ಇದಕ್ಕೆ ಪೂರ್ವಭಾವಿಯಾಗಿ ಬ್ರಿಟನ್‌ ರಾಜಧಾನಿ ಲಂಡನ್‌ನಲ್ಲಿ ಭಾರತೀಯ ಹೈಕಮಿಷನ್ ಯೋಗ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ 700 ಮಂದಿ ಉತ್ಸಾಹದಿಂದ ಪಾಲ್ಗೊಂಡರು. ಐಕಾನಿಕ್ ಪ್ರತಿಮೆಗಳಿರುವ ಟ್ರಫಾಲ್ಗರ್ ಸ್ಕ್ವೇರ್‌ನಲ್ಲಿ ಕಾರ್ಯಕ್ರಮ ಆಯೋಜಿಸ ಲಾಗಿದ್ದು, ಗಮನ ಸೆಳೆದಿದೆ.

ಇಂಡಿಯನ್ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ, ಲಂಡನ್‌ನ ಈ ಕೇಂದ್ರ ಸ್ಥಾನದಲ್ಲಿ 700ಕ್ಕೂ ಅಧಿಕ ಜನರನ್ನು ಸೇರಿಸಲು ಸಾಧ್ಯವಾದದ್ದರಿಂದ ಅತ್ಯಂತ ಸಂತಸವಾಗಿದೆ. ಪ್ರತಿಷ್ಠಿತ ಪ್ರತಿಮೆಗಳು ಸುತ್ತಲೂ ಇವೆ. ಹಲವು ಯೋಗ ಶಾಲೆಗಳು ಸಹ ನಮ್ಮ ಜೊತೆ ಕೈಜೋಡಿಸಿವೆ’ಎಂದಿದ್ದಾರೆ.

ವಿವಿಧ ಸಮುದಾಯಗಳ ಜನರು ಯೋಗ ಕಾರ್ಯಮದಲ್ಲಿ ಭಾಗವಹಿಸಿದ್ದರು. ಯೋಗ ಎಲ್ಲರನ್ನೂ ಒಗ್ಗೂಡಿಸುತ್ತದೆ ಮತ್ತು ಎಲ್ಲರಿಗಾಗಿ ಯೋಗ ಎಂದು ನಮ್ಮ ಪ್ರಧಾನಿ ಮೋದಿ ಹೇಳುತ್ತಾರೆ ಎಂದು ದೊರೈಸ್ವಾಮಿ ಹೇಳಿದರು.

ಈ ವರ್ಷದ ಯೋಗ ಕಾರ್ಯಕ್ರಮದಲ್ಲಿ ಯೋಗ ಶಾಲೆಗಳು, ವಿವಿಧ ಸಮುದಾಯಗಳ ಜನರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ವಿಶೇಷ. ಆದರೆ, ಕಾರ್ಯಕ್ರಮದಲ್ಲಿ ಬದಲಾವಣೆ ಇಲ್ಲ ಎಂದು ಅವರು ಹೇಳಿದರು.

ಬ್ರಿಟನ್ ಪ್ರಜೆ ಇಂದರ್‌ಪಾಲ್ ಓಹ್ರಿ ಚಾಂಡೆಲ್ ಈ ವರ್ಷದ ಯೋಗ ಕಾರ್ಯಕ್ರಮದ ಥೀಮ್ ‘ಮಹಿಳಾ ಸಬಲೀಕರಣ’ ಎಂದು ಹೇಳಿದರು. ಭಾರತೀಯರು ಮತ್ತು ಏಷ್ಯನ್ನರಿಗೆ ಯೋಗವು ಅವರ ಪರಂಪರೆಯ ಪ್ರಮುಖ ಭಾಗವಾಗಿದೆ ಎಂದು ಹೇಳಿದರು.

‘ಇವತ್ತಿನ ಕಾರ್ಯಕ್ರಮದ ವಿಶೇಷವೆಂದರೆ ಇಲ್ಲಿಗೆ ಕ್ರಿಕೆಟ್ ಸರಣಿಗಾಗಿ ಆಗಮಿಸಿರುವ ಭಾರತೀಯ ಕಿವುಡರ ಕ್ರಿಕೆಟ್ ತಂಡದ ಸದಸ್ಯರು ಯೋಗ ಶಿಬಿರದಲ್ಲಿ ಭಾಗವಹಿಸಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.