ಟೆಹ್ರಾನ್: ಶಿಯಾ ಉಗ್ರಗಾಮಿ ಸಂಘಟನೆ ಮತ್ತು ಇರಾನ್(Iran) ಮಿತ್ರ ಪಕ್ಷವಾದ ಹೆಜ್ಬುಲ್ಲಾ(Hezbollah)ವನ್ನು ಗುರಿಯಾಗಿಸಲು ಲೆಬನಾನ್ ಮೇಲೆ ಇಸ್ರೇಲ್ ದಾಳಿ(Iran Attacks Israel) ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್ ಮಂಗಳವಾರ ಇಸ್ರೇಲ್ ಮೇಲೆ 200 ಕ್ಷಿಪಣಿಗಳ ದಾಳಿ ಮಾಡಿದೆ. ಈ ಭೀಕರ ದಾಳಿಯ ದೃಶ್ಯವನ್ನು ದುಬೈಗೆ ತೆರಳುತ್ತಿದ್ದ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಬಿಡುಗಡೆ ಮಾಡಿರುವ ಈ ದೃಶ್ಯಾವಳಿಗಳಲ್ಲಿ ಇರಾನ್ ನಡೆಸಿರುವ ಕ್ಷಿಪಣಿ ದಾಳಿಯ ತೀವ್ರತೆಯನ್ನು ತೋರಿಸುತ್ತದೆ.
EXCLUSIVE: Video from passenger jet en route to Dubai, shows missiles firing out of Iran towards Israel pic.twitter.com/6VUv9OlDUM
— New York Post (@nypost) October 2, 2024
ದುಬೈಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಈ ಭೀಕರ ಕ್ಷಿಪಣಿ ದಾಳಿ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಕ್ಷಿಪಣಿಗಳು ಒಂದರ ಹಿಂದೆ ಒಂದರಂತೆ ಸಾಲಾಗಿ ಇರಾನ್ನತ್ತ ಸಾಗುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿವೆ.
RAW FOOTAGE: Watch as Iranian missiles rain over the Old City in Jerusalem, a holy site for Muslims, Christians and Jews.
— Israel Defense Forces (@IDF) October 1, 2024
This is the target of the Iranian regime: everyone. pic.twitter.com/rIqUZWN3zy
ನಿನ್ನೆ ತಡರಾತ್ರಿ ಕ್ಷಿಪಣಿ ದಾಳಿ ನಡೆಸಿದ ಇರಾನ್ ವಿರುದ್ಧ ಇಸ್ರೇಲ್ ಪ್ರತಿಕಾರದ ಶಪತ ಮಾಡಿದೆ. ಶಿಯಾ ಉಗ್ರಗಾಮಿ ಸಂಘಟನೆ ಮತ್ತು ಇರಾನ್ ಮಿತ್ರ ಪಕ್ಷವಾದ ಹೆಜ್ಬುಲ್ಲಾವನ್ನು ಗುರಿಯಾಗಿಸಲು ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್ ಮಂಗಳವಾರ ಇಸ್ರೇಲ್ ಮೇಲೆ 200 ಕ್ಷಿಪಣಿಗಳ ದಾಳಿ ಮಾಡಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಇಸ್ರೇಲ್, ಈ ಉದ್ಧಟತನಕ್ಕೆ ಇರಾನ್ ಬೆಲೆ ತೆರಲೇಬೇಕು ಎಂದು ಹೇಳಿದ್ದು, ಶೀಘ್ರದಲ್ಲೇ ಬಹುದೊಡ್ಡ ಮಟ್ಟದ ದಾಳಿಗೆ ಇಸ್ರೇಲ್ನಿಂದ ಯೋಜನೆ ರೂಪಿಸಿರುವುದು ಸ್ಪಷ್ಟವಾಗಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದಾಳಿ ಬೆನ್ನಲ್ಲೇ ರಾತ್ರೋರಾತ್ರಿ ಭದ್ರತಾ ಸಚಿವಾಲಯದ ಸಭೆ ಕರೆದಿದ್ದು, ಹಲವು ವಿಚಾರಗಳನ್ನು ಚರ್ಚೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಇರಾನ್ ದೊಡ್ಡ ತಪ್ಪು ಮಾಡಿದೆ. ಇದಕ್ಕೆ ತಕ್ಕ ಶಿಕ್ಷೆ ಸಿಕ್ಕೇ ಸಿಗುತ್ತದೆ. ಬಹುದೊಡ್ಡಮಟ್ಟದಲ್ಲಿ ಇರಾನ್ ಈ ಕೃತ್ಯಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ. ಆ ಮೂಲಕ ಇರಾನ್ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಇರಾನ್ನ ಕ್ಷಿಪಣಿ ದಾಳಿಯು ವಿಫಲವಾಗಿದೆ. ಗಾಜಾ, ಲೆಬನಾನ್ ಮತ್ತು ಇತರ ಸ್ಥಳಗಳಲ್ಲಿ ತನ್ನ ಶತ್ರುಗಳು ಕಲಿತಂತೆ ಇರಾನ್ ಶೀಘ್ರದಲ್ಲೇ ತಕ್ಕ ಪಾಠವನ್ನು ಕಲಿಯಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ನಮ್ಮ ಮೇಲೆ ಯಾರೇ ದಾಳಿ ಮಾಡಿದರೂ ನಾವು ಅವರ ಮೇಲೆ ದಾಳಿ ಮಾಡುತ್ತೇವೆ ಎಂದರು.
ಈ ಸುದ್ದಿಯನ್ನೂ ಓದಿ:Iran Attacks Israel: ಕ್ಷಿಪಣಿ ದಾಳಿಗೆ ಇರಾನ್ ಬೆಲೆ ತೆರಲೇಬೇಕು-ಇಸ್ರೇಲ್ನಿಂದ ಎಚ್ಚರಿಕೆ; ಮತ್ತೊಂದು ಡೆಡ್ಲಿ ಅಟ್ಯಾಕ್ಗೆ ಸಜ್ಜು