Thursday, 12th December 2024

ಇರಾನಿನ ಧರ್ಮಗುರು ಅಬ್ಬಾಸ್ ಅಲಿ ಸೊಲೈಮಾನಿ ಹತ್ಯೆ

ರಾನ್: ಇರಾನಿನ ಪ್ರಬಲ ಧರ್ಮಗುರು ಅಬ್ಬಾಸ್ ಅಲಿ ಸೊಲೈಮಾನಿ ಅವರನ್ನು ಸಶಸ್ತ್ರ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ. ಅಬ್ಬಾಸ್-ಅಲಿ ಸೊಲೈಮಾನಿ ಹತ್ಯೆಯಾದಾಗ ಅವರು ಬ್ಯಾಂಕಿನೊಳಗೆ ಇದ್ದರು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಪರಿಚಿತ ವ್ಯಕ್ತಿಯೊಬ್ಬ ಕಾವಲುಗಾರನ ಬಂದೂಕನ್ನು ಕಸಿದು ಕೊಂಡು ಅಯತೊಲ್ಲಾ ಅಬ್ಬಾಸ್-ಅಲಿ ಸೊಲೈಮಾನಿ ಮೇಲೆ ಗುಂಡು ಹಾರಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.

ಅಬ್ಬಾಸ್-ಅಲಿ ಸೊಲೈಮಾನಿ ಅವರು ದೇಶದ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವ ತಜ್ಞರ ಅಸೆಂಬ್ಲಿಯ ಸದಸ್ಯ ರಾಗಿದ್ದರು.

ಇರಾನಿನ ಧರ್ಮಗುರು ಅಬ್ಬಾಸ್-ಅಲಿ ಸೊಲೈಮಾನಿ ಅವರ ಮೇಲೆ ಉತ್ತರ ಪ್ರಾಂತ್ಯದ ಮಜಾಂಡರನ್ ನ ಬಬೋಲ್ಸರ್ ನಗರದಲ್ಲಿ ಬುಧವಾರ ದಾಳಿ ನಡೆದಿದೆ. ದಾಳಿ ನಡೆದ ಕೂಡಲೇ ದಾಳಿಕೋರನನ್ನು ಬಂಧಿಸಲಾಗಿದೆ.