ಜೆರುಸಲೇಮ್: ಇಸ್ರೇಲ್‌ನ ಅಧ್ಯಕ್ಷರಾಗಿ ಹಿರಿಯ ರಾಜಕಾರಣಿ ಐಸಾಕ್ ಹರ್ಜಾಗ್ ಆಯ್ಕೆಯಾಗಿದ್ದಾರೆ.
120 ಸದಸ್ಯ ಬಲದ ಇಸ್ರೇಲ್ ಸಂಸತ್‌ನಲ್ಲಿ ಗುಪ್ತ ಮತದಾನದ ಮೂಲಕ ಆಯ್ಕೆ ನಡೆಯಿತು. ಪ್ರಸ್ತುತ ಅಧ್ಯಕ್ಷರಾಗಿರುವ ರೆವೆನ್ ರಿವ್‌ಲಿನ್ ಅವರ ಅಧಿಕಾರಾವಧಿ ಮುಂದಿನ ತಿಂಗಳು ಕೊನೆಗೊಳ್ಳಲಿದೆ.
ಹರ್ಜಾಗ್ ಅವರು ಲೇಬರ್ ಪಾರ್ಟಿಯ ಮುಖ್ಯಸ್ಥರಾಗಿದ್ದರು. 2013ರಲ್ಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. isaac herzogಹರ್ಜಾಗ್ ಅವರ ತಂದೆ ಚೇಮ್ ಹರ್ಜಾಗ್ ಅವರು ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ನ ರಾಯಭಾರಿಯಾಗಿ, ನಂತರ ಇಸ್ರೇಲ್‌ನ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದ್ದರು.