Friday, 22nd November 2024

Israel Airstrike: ದಕ್ಷಿಣ ಲೆಬನಾನ್‌ ಹೆಜ್ಬುಲ್ಲಾಗಳ ಉಡಾವಣಾ ಕೇಂದ್ರವಾಗಿ ಮಾರ್ಪಟ್ಟಿದೆ- ಇಸ್ರೇಲ್‌ ಸೇನೆಯಿಂದ ಮಹತ್ವದ ಪೋಸ್ಟ್‌

Israel strikes

ಬೈರುತ್‌: ಇಸ್ರೇಲ್‌ ವೈಮಾನಿಕ ದಾಳಿ(Israel Airstrike)ಗೆ ಲೆಬನಾನ್‌ ಸ್ಥಿತಿ ಅಯೋಮಯವಾಗಿದೆ. ಈ ನಡುವೆ ಇಸ್ರೇಲ್ ಡಿಫೆನ್ಸ್ ಫೋರ್ಸಸ್ (IDF) ಲೆಬನಾನ್‌ನೊಳಗೆ ತನ್ನ ದಾಳಿಗಳನ್ನು ವಿವರಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ. ಲೆಬನಾನ್‌ನ ಜನನಿಬಿಡ ಪ್ರದೇಶಗಳಲ್ಲಿ ಹೆಜ್ಬುಲ್ಲಾ ಉಗ್ರರು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿದೆ ಎಂದು ಆರೋಪಿಸಿದೆ.

ಕಳೆದ 20 ವರ್ಷಗಳಿಂದ, ಹೆಜ್ಬುಲ್ಲಾಗಳು ಲೆಬನಾನ್‌ನಲ್ಲಿನ ನಾಗರಿಕರು ವಾಸ್ತವ್ಯವಿರುವ ಪ್ರದೇಶಗಳಲ್ಲಿ ತನ್ನ ಭಯೋತ್ಪಾದಕ ಜಾಲವನ್ನು ನಿರ್ಮಿಸಿದೆ. ಹೆಜ್ಬುಲ್ಲಾಗಳು ದಕ್ಷಿಣ ಲೆಬನಾನ್‌ನ ಪ್ರಾಂತ್ಯಗಳನ್ನು ಇಸ್ರೇಲ್‌ನ ಮೇಲೆ ದಾಳಿ ಮಾಡಲು ಸಂಪೂರ್ಣವಾಗಿ ಉಡಾವಣಾ ಕೇಂದ್ರವಾಗಿ ಮಾರ್ಪಟು ಮಾಡಿದೆ. ಲೆಬನಾನಿನ ಮನೆ ಮನೆಗಳಲ್ಲಿ ಹೆಜ್ಬುಲ್ಲಾ ಉಗ್ರರು ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿದ್ದಾರೆ ಎಂದು IDF ಹೇಳಿದೆ.

ಇನ್ನು ಈ ವಿಡಿಯೋ ಮೂಲಕ ಲೆಬನಾನ್‌ ನಾಗರಿಕರಿಗೆ ಸಂದೇಶ ನೀಡುವ ಪ್ರಯತ್ನ ಮಾಡಿರುವ ಇಸ್ರೇಲ್‌, ಹೆಜ್ಬುಲ್ಲಾಗಳು ಈ ವಿಡಿಯೋಗಳನ್ನು ಜನಸಾಮಾನ್ಯರಿಗೆ ತಲುಪದಂತೆ ಮಾಡುತ್ತಾರೆ ಮತ್ತು ಅವರೂ ಇದನ್ನು ನೋಡಲು ಬಯಸುವುದಿಲ್ಲ. IDFನ ಈ ವೀಡಿಯೊವನ್ನು ಲೆಬನಾನ್‌ನಲ್ಲಿನ ಜನನಿಬಿಡ ಪ್ರದೇಶಗಳಲ್ಲಿನ ದಾಳಿಯ ಮೇಲಿನ ಟೀಕೆಗಳನ್ನು ದೂರವಿಡುವ ಪ್ರಯತ್ನವಾಗಿ ನೋಡಲಾಗುತ್ತಿದೆ.

ಐಡಿಎಫ್ ನೂರಾರು ಹಿಜ್ಬುಲ್ಲಾ ಗುರಿಗಳ ಮೇಲೆ ನಿಖರವಾದ ಗುಪ್ತಚರ-ಆಧಾರಿತ ದಾಳಿಗಳನ್ನು ನಡೆಸುವ ಮೂಲಕ ಹೆಜ್ಬೊಲ್ಲಾ ಭಯೋತ್ಪಾದಕ ಸಂಘಟನೆಯ ವಿರುದ್ಧ ರಕ್ಷಣಾತ್ಮಕ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ನಾವು ಹೆಜ್ಬುಲ್ಲಾಗಳ ಶಸ್ತ್ರಾಸ್ತ್ರಗಳನ್ನು ಧ್ವಂಸ ಮಾಡದೇ ಇದ್ದರೆ ಆ ಶಸ್ತ್ರಾಸ್ತ್ರಗಳು ಕ್ಷಿಪಣಿಗಳು ಬಾಂಬ್‌ಗಳು ಇಸ್ರೇಲ್‌ ವಿರುದ್ಧ ಬಳಕೆಯಾಗುತ್ತದೆ ಎಂಬುದು ನಮಗೆ ಅರಿವಿದೆ. ಇಸ್ರೇಲಿ ಕುಟುಂಬಗಳ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಹೀಗಾಗಿ ಈ ದಾಳಿ ನಡೆಸಲಾಗುತ್ತಿದೆ ಎಂದು ಐಡಿಎಫ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಜ್ಬುಲ್ಲಾ ಡ್ರೋನ್‌ ಮ್ಯಾನ್‌ ಹತ್ಯೆ

ಇಸ್ರೇಲಿ ಸೈನ್ಯವು ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾದ ನೆಲೆಗಳನ್ನು ನಾಶಮಾಡಲು ಮುಂದಾಗಿದೆ. ಹಿಜ್ಬುಲ್ಲಾಗಳ ಕಮಾಂಡರ್‌ಗಳನ್ನೇ ಗುರಿಯಾಗಿಸಿ ಈ ದಾಳಿ ನಡೆಸಲಾಗುತ್ತಿದ್ದು, ಬೈರುತ್‌ನಲ್ಲಿ ಹಿಜ್ಬುಲ್ಲಾದ ವೈಮಾನಿಕ ಪಡೆಯ ಕಮಾಂಡರ್ ಮುಹಮ್ಮದ್ ಹುಸೇನ್ ಸರೂರ್ ಅಲಿಯಾಸ್ ಅಬು ಸಲೇಹ್‌ನನ್ನು ಕೊಂದಿರುವುದಾಗಿ ಐಡಿಎಫ್ ಗುರುವಾರ ತಿಳಿಸಿದೆ.

ಮುಹಮ್ಮದ್ ಹುಸೇನ್ ಸರೂರ್ ಇಸ್ರೇಲ್ ಜನರನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಯುಎವಿಗಳು ಸೇರಿದಂತೆ ಹಲವಾರು ವೈಮಾನಿಕ ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದನು. ಈ ಕಾರಣಕ್ಕಾಗಿ ಅವನು ಇಸ್ರೇಲ್‌ನ ಗುರಿಯಾಗಿದ್ದನು. IDF ಪ್ರಕಾರ, ಸರೂರ್ 1980 ರ ದಶಕದಲ್ಲಿ ಹೆಜ್ಬೊಲ್ಲಾಹ್‌ಗೆ ಸೇರಿದನು. ಭಯೋತ್ಪಾದಕ ಗುಂಪಿನ ವಾಯು ರಕ್ಷಣಾ, ರಾಡ್ವಾನ್ ಫೋರ್ಸ್‌ನಲ್ಲಿ ಅಜೀಜ್ ಘಟಕ ಮತ್ತು ಯೆಮೆನ್‌ನಲ್ಲಿ ಹೆಜ್ಬುಲ್ಲಾ ಅವರ ಅಟ್ಯಾಚ್ ಸೇರಿದಂತೆ ಸಂಘಟನೆಯೊಳಗೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದನು. ಅಲ್ಲಿ ಅವರು ಕಮಾಂಡರ್ ಆಗಿ ಕಾರ್ಯನಿರ್ವಹಿಸಿದನು. ಹೌತಿಗಳ ವಿರುದ್ಧ ಹೋರಾಡುವುದಕ್ಕೆ ವಾಯುಪಡೆಯಲ್ಲಿ ಸೇರಿಸಲಾಯಿತು. ಯುದ್ಧದ ಸಮಯದಲ್ಲಿ ಅದು ಇಸ್ರೇಲ್ ಮೇಲೆ ಹಲವಾರು ಸ್ಫೋಟಕ ಡ್ರೋನ್ ದಾಳಿಗಳನ್ನು ನಡೆಸಿದ್ದ ಎಂದು IDF ಹೇಳಿದೆ.

ಈ ಸುದ್ದಿಯನ್ನೂ ಓದಿ: Israel Airstrike: ಟಿವಿ ಲೈವ್‌ ವೇಳೆಯೇ ಅಪ್ಪಳಿಸಿದ ಇಸ್ರೇಲ್‌ ಕ್ಷಿಪಣಿ; ಜರ್ನಲಿಸ್ಟ್‌ ಜಸ್ಟ್‌ ಮಿಸ್‌! ಇಲ್ಲಿದೆ ವಿಡಿಯೋ