Friday, 22nd November 2024

Israel Airstrike: ಟಿವಿ ಲೈವ್‌ ವೇಳೆಯೇ ಅಪ್ಪಳಿಸಿದ ಇಸ್ರೇಲ್‌ ಕ್ಷಿಪಣಿ; ಜರ್ನಲಿಸ್ಟ್‌ ಜಸ್ಟ್‌ ಮಿಸ್‌! ಇಲ್ಲಿದೆ ವಿಡಿಯೋ

Israel strikes

ಬೈರುತ್‌: ಇಸ್ರೇಲ್‌ ವೈಮಾನಿಕ ದಾಳಿ(Israel Airstrike)ಗೆ ಲೆಬನಾನ್‌ ಸ್ಥಿತಿ ಅಯೋಮಯವಾಗಿದೆ. ಈಗಾಗಲೇ 500ಕ್ಕೂ ಅದಿಕ ಮಂದಿ ಸಾವನ್ನಪ್ಪಿದ್ದು, ಲೆಕ್ಕವಿಲ್ಲದಷ್ಟು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಈ ಭೀಕರ ದಾಳಿಗೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್‌(Viral video) ಆಗುತ್ತಿದ್ದು, ನೆಟ್ಟಿಗರು ದಂಗಾಗಿದ್ದಾರೆ. ಹೌದು ಲೈವ್ ಟಿವಿ ಸಂದರ್ಶನವನ್ನು ನಡೆಸುತ್ತಿದ್ದಾಗ ಇಸ್ರೇಲಿ ಕ್ಷಿಪಣಿಯೊಂದು ಪತ್ರಕರ್ತನೋರ್ವನ ಮನೆ ಮೇಲೆ ಅಪ್ಪಳಿಸಿದೆ. ಈ ಭೀಕರ ದೃಶ್ಯ ಎಲ್ಲರನ್ನು ಬೆಚ್ಚಿ ಬೀಳಿಸಿದೆ.

ಲೆಬನಾನ್‌ನ ಮಿರಯಾ ಇಂಟರ್‌ನ್ಯಾಷನಲ್‌ ನೆಟ್‌ವರ್ಕ್‌ ವಾಹಿನಿ ಮುಖ್ಯ ಸಂಪಾದಕ ಫಾಡಿ ಬೌಡಯಾ ತಮ್ಮ ಮನೆಯಿಂದಲೇ ಇಸ್ರೇಲ್‌ನ ಕ್ಷಿಪಣಿ ದಾಳಿ ಮತ್ತು ಪ್ರಸ್ತುತ ಲೆಬನಾನ್‌ನ ಸ್ಥಿತಿಗತಿಯ ಬಗ್ಗೆ ಲೈವ್‌ನಲ್ಲಿ ವಿವರಿಸುತ್ತಿದ್ದರು. ಅವರು ಮಾತನಾಡುತ್ತಾ ಇರುವಾಗ ಏಕಾಏಕಿ ಕ್ಷಿಪಣಿಯೊಂದು ಅವರ ಮನೆ ಅಪ್ಪಳಿಸಿದೆ. ಅದರ ರಭಸಕ್ಕೆ ಫಾಡಿ ಬೌಡಯಾ ಅವರು ತಮ್ಮ ಸಮತೋಲನವನ್ನು ಕಳೆದುಕೊಂಡು ದೂರಕ್ಕೆ ಎಸೆಯಲ್ಪಟ್ಟರು.

ಈ ದೃಶ್ಯಾವಳಿಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ ಜೋರು ಕಿರುಚಾಟ ಕೇಳಿಸುತ್ತದೆ. ಅದೃಷ್ಟವಶಾತ್‌ ಘಟನೆಯಲ್ಲಿ ಬೌಡಯಾ ಅವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೇವಲ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ಈ ಪತ್ರಕರ್ತ ಹಿಜ್ಬೊಲ್ಲಾ ಉಗ್ರರ ಬಗ್ಗೆ ಸಹಾನುಭೂತಿ ಹೊಂದಿದ್ದಾರೆಂದು ಹೇಳಲಾಗಿದೆ.

ಈ ಬಗ್ಗೆ ಬೌಡಯಾ X ಮೂಲಕ ಮಾಹಿತಿ ಹಂಚಿಕೊಂಡಿದ್ದು, ಕರೆ ಮಾಡಿದ, ಸಂದೇಶ ಕಳುಹಿಸಿದ, ಚೆಕ್ ಇನ್ ಮಾಡಿ ನನ್ನ ಅರೋಗ್ಯ ವಿಚಾರಿಸಿದ ಎಲ್ಲರಿಗೂ ಧನ್ಯವಾದಗಳು. ದೇವರಿಗೆ ಧನ್ಯವಾದಗಳು, ನಾನು ಚೆನ್ನಾಗಿದ್ದೇನೆ, ದೇವರು ಮತ್ತು ಆತನ ಆಶೀರ್ವಾದಕ್ಕೆ ಆಭಾರಿ. ನಮ್ಮ ಮಾಧ್ಯಮ ಕರ್ತವ್ಯವನ್ನು ಮುಂದುವರಿಸಲು ನಾವು ಹಿಂತಿರುಗುತ್ತೇವೆ. ನನ್ನ ಹೃದಯಾಂತರಾಳದಿಂದ ಧನ್ಯವಾದಗಳು ಎಂದು ಅವರು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Israel Airstrike: ಹೆಜ್ಬುಲ್ಲಾಗಳನ್ನು ಪುಡಿಗಟ್ಟಿದ ಇಸ್ರೇಲ್‌ ಸೇನೆ; 500ಕ್ಕೂ ಅಧಿಕ ಬಂಡುಕೋರರ ಹತ್ಯೆ