Friday, 20th September 2024

ಇಸ್ರೇಲ್ ಪ್ರಧಾನಿಯಾಗಿ ನೆತನ್ಯಾಹು ಪ್ರಮಾಣವಚನ ಶೀಘ್ರ

ಇಸ್ರೇಲ್ : ಬೆಂಜಮಿನ್ ನೆತನ್ಯಾಹು ಶೀಘ್ರದಲ್ಲೇ ಇಸ್ರೇಲ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನೆತನ್ಯಾಹು ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವ್ರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಇನ್ನು ನೆತನ್ಯಾಹು ಟ್ವೀಟ್ ಮಾಡಿದ್ದು, ‘ಚುನಾವಣೆಯಲ್ಲಿ ನಮಗೆ ದೊರೆತ ಅಪಾರ ಜನ ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಇಸ್ರೇಲ್ ಪ್ರಜೆಗಳ ಹಿತದೃಷ್ಟಿಯಿಂದ ಕೆಲಸ ಮಾಡುವ ಇಂತಹ ಸರಕಾರ ಸ್ಥಾಪನೆಯಾಗಲಿದೆ’ ಎಂದಿದ್ದಾರೆ.

ಸಮ್ಮಿಶ್ರಕ್ಕಾಗಿ ನಡೆಯುತ್ತಿರುವ ಮಾತುಕತೆಗಳ 38 ದಿನಗಳ ಬಳಿಕ ನೆತನ್ಯಾಹು ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿಗಳ ಪ್ರಕಾರ, ಸರ್ಕಾರ ರಚಿಸಲು ನೀಡಲಾದ ಸಮಯ ಮುಗಿಯುವ 20 ನಿಮಿಷ ಗಳ ಮೊದಲು ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರಿಗೆ ನೆತನ್ಯಾಹು ಕರೆ ಬಂದಿದೆ.

ಹೊಸ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸುವ ಮೊದಲು ವಿವಾದಾತ್ಮಕ ಕಾನೂನು ಗಳನ್ನ ಅಂಗೀಕರಿಸುವ ಷರತ್ತಿನ ಮೇಲೆ ಅನೇಕ ಪಕ್ಷಗಳು ನೆತನ್ಯಾಹು ಅವರನ್ನ ಬೆಂಬಲಿಸಿವೆ. ಈಗ ಈ ಹೊಸ ಕಾನೂನುಗಳನ್ನ ಜನವರಿಯ ಆರಂಭದಲ್ಲಿಯೇ ಅಂಗೀ ಕರಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಇನ್ನು ಪ್ರಮಾಣ ವಚನ ಸ್ವೀಕಾರದ ದಿನಾಂಕ ಪ್ರಕಟಿಸಿಲ್ಲ. ಆದ್ರೆ, ಜನಾದೇಶವನ್ನ ಸ್ವೀಕರಿಸಿದ ಒಂದು ವಾರದ ನಂತರ ನೆತನ್ಯಾಹು ಹೊಸ ಸರ್ಕಾರವನ್ನ ರಚಿಸಲು ಯೋಜಿಸಿದ್ದಾರೆ ಎಂದು ವರದಿ ಮಾಡಿದೆ.