Monday, 16th September 2024

ಕದನ ವಿರಾಮಕ್ಕೆ ಇಸ್ರೇಲ್, ಹಮಾಸ್ ಒಪ್ಪಿಗೆ, ಗಾಜಾ ಸಿಟಿಯಲ್ಲಿ ಸಂಭ್ರಮಾಚರಣೆ

ಟೆಲ್ ಅವಿವ್: ಹನ್ನೊಂದು ದಿನಗಳ ಭೀಕರ ಏರ್ ಸ್ಟ್ರೈಕ್ ಮತ್ತು ರಾಕೆಟ್ ದಾಳಿಯಲ್ಲಿ ನೂರಾರು ಜನರು ಹತರಾದ ಬಳಿಕ ಗುರುವಾರ ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ.

ಗಾಜಾ ಪ್ರದೇಶದಲ್ಲಿ 11 ದಿನಗಳ ಮಿಲಿಟರಿ ಕಾರ್ಯಾಚರಣೆ ತಡೆಯಲು ಏಕಪಕ್ಷೀಯ ಕದನ ವಿರಾಮಕ್ಕೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಭದ್ರತಾ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಹಮಾಸ್ ಸಂಘಟನೆಯೂ ಕದನ ವಿರಾಮ ದೃಢಪಡಿಸಿದೆ.

ಜೆರುಸಲೇಂನ ಅಲ್-ಅಕ್ಸಾ ಮಸೀದಿಯು ವಿವಾದದ ಕೇಂದ್ರ ಬಿಂದುವಾಗಿದ್ದು ಇಲ್ಲಿ ಉಂಟಾಗಿದ್ದ ಸಂಘರ್ಷವನ್ನು ತಡೆಯಲು ಪೊಲೀಸರು ಅಶ್ರುವಾಯು ಹಾಗೂ ಗ್ರೆನೇಡ್ ದಾಳಿ ನಡೆಸಿದ್ದರು. ಇದು ಹಮಾಸ್ ಮತ್ತು ಇಸ್ರೇಲ್ ನಡುವೆ ಸಂಘರ್ಷಕ್ಕೆ ಕಾರಣ ವಾಗಿತ್ತು.

ಮೇ 10ರಂದು ಸಂಘರ್ಷ ಪ್ರಾರಂಭವಾದಾಗಿನಿಂದ, ಇಸ್ರೇಲ್ ನೂರಾರು ವೈಮಾನಿಕ ದಾಳಿಗಳನ್ನು ನಡೆಸಿತ್ತು. ಹಮಾಸ್‌ನ ಮೂಲಸೌಕರ್ಯ ಕೇಂದ್ರಗಳು, 9 ಕಿ.ಮೀ ಉದ್ದ ಉಗ್ರ ಸುರಂಗಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು.

ಗಾಜಾದ ವಸತಿ ಪ್ರದೇಶಗಳಲ್ಲಿ ಅಡಗಿದ್ದ ಹಮಾಸ್ ಮತ್ತು ಇತರ ಉಗ್ರಗಾಮಿ ಗುಂಪುಗಳು ಇಸ್ರೇಲಿ ನಗರಗಳ ಮೇಲೆ 4,000 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿದ್ದವು.

 

Leave a Reply

Your email address will not be published. Required fields are marked *