ಇಸ್ರೇಲ್: ಒತ್ತೆಯಾಳುಗಳಾಗಿದ್ದ 50 ಮಹಿಳೆಯರು ಮತ್ತು ಮಕ್ಕಳ ಬಿಡುಗಡೆಗೆ ಪ್ರತಿಯಾಗಿ 150 ಪ್ಯಾಲೆಸ್ತೀನ್ ಮಹಿಳೆಯರು ಮತ್ತು ಅಪ್ರಾಪ್ತ ಕೈದಿ ಗಳನ್ನು ಜೈಲಿನಿಂದ ಬಿಡುಗಡೆ ಮಾಡುವ ಮೂಲಕ ಇಸ್ರೇಲ್ ಸರ್ಕಾರ ನಾಲ್ಕು ದಿನಗಳ ಕದನ ವಿರಾಮಕ್ಕೆ ಅನುಮೋದನೆ ನೀಡಿದೆ.
ಗಾಝಾದಲ್ಲಿ ಒತ್ತೆಯಾಳುಗಳಾಗಿ ಇರಿಸಲಾಗಿರುವ 50 ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಲು ಪ್ಯಾಲೆಸ್ತೀನ್ ಹಮಾಸ್ ಉಗ್ರಗಾಮಿ ಗಳೊಂದಿಗಿನ ಒಪ್ಪಂದವನ್ನು ಇಸ್ರೇಲ್ ಸರ್ಕಾರ ಬೆಂಬಲಿಸುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ.
ಇದಕ್ಕೆ ಪ್ರತಿಯಾಗಿ, ಭದ್ರತಾ ಸಂಬಂಧಿತ ಅಪರಾಧಗಳಿಗಾಗಿ ತನ್ನ ಜೈಲುಗಳಲ್ಲಿ ಬಂಧಿಯಾಗಿರುವ ಸುಮಾರು 150 ಫೆಲೆಸ್ತೀನ್ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರನ್ನು ಇಸ್ರೇಲ್ ಬಿಡುಗಡೆ ಮಾಡಲಿದೆ. ಯಾವುದೇ ಮಾರಣಾಂತಿಕ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ನೇರವಾಗಿ ಆರೋಪಿಸದವರನ್ನು ಬಿಡುಗಡೆ ಮಾಡಲಾಗುವುದು.
ಒಪ್ಪಂದದ ವಿಶಾಲ ಚೌಕಟ್ಟಿನಡಿಯಲ್ಲಿ, ಆ 96 ಗಂಟೆಗಳಲ್ಲಿ ಹೋರಾಟವನ್ನು ನಿಲ್ಲಿಸಲು ಪ್ರತಿಯಾಗಿ ಮೊದಲ ನಾಲ್ಕು ದಿನಗಳಲ್ಲಿ 50 ಒತ್ತೆಯಾ ಳುಗಳನ್ನು ಬಿಡುಗಡೆ ಮಾಡಲಾಗುವುದು. ಸುಮಾರು 40 ಮಕ್ಕಳು ಮತ್ತು 13 ತಾಯಂದಿರನ್ನು ಹಮಾಸ್ ಒತ್ತೆಯಾಳುಗಳನ್ನಾಗಿ ತೆಗೆದುಕೊಂಡಿದೆ.
ಅನುಮೋದಿತ ಒಪ್ಪಂದದಲ್ಲಿ 30 ಮಕ್ಕಳು, ಎಂಟು ತಾಯಂದಿರು ಮತ್ತು 12 ಇತರ ಮಹಿಳೆಯರ ಬಿಡುಗಡೆಯೂ ಸೇರಿದೆ.