Friday, 18th October 2024

ಜೋಹಾನ್ಸ್​ಬರ್ಗ್: ವಿಷಾನಿಲ ಸೋರಿಕೆ ದುರಂತ, 24 ಜನರು ಸಾವು

ಬೋಕ್ಸ್‌ಬರ್ಗ್: ಎಕುರ್‌ಹುಲೇನಿಯ ಬೋಕ್ಸ್‌ಬರ್ಗ್‌ನ ನಗರದಲ್ಲಿ ವಿಷಾನಿಲ ಸೋರಿಕೆಯಾಗಿ, ಅದನ್ನು ಸೇವಿಸಿದ 24 ಜನರು ಸಾವನ್ನಪ್ಪಿದ್ದಾರೆ.

ಮೃತರಲ್ಲಿ ಮಕ್ಕಳು, ಮಹಿಳೆಯರು ಇದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಬೋಕ್ಸ್‌ಬರ್ಗ್‌ ಪ್ರದೇಶದಲ್ಲಿ ಅಕ್ರಮ ಚಿನ್ನದ ಗಣಿಗಾರಿಕೆ ನಡೆಸಲಾಗುತ್ತದೆ. ಚಿನ್ನವನ್ನು ಸಂಸ್ಕರಿಸಲು ಗುಡಿಸಲುಗಳಲ್ಲಿ ಜನರು ಸಿಲಿಂಡರ್​ ಬಳಸುತ್ತಿದ್ದರು. ಈ ವೇಳೆ ಸಿಲಿಂಡರ್​ನಿಂದ ಗ್ಯಾಸ್​ ಸೋರಿಕೆಯಾಗಿ ಅನಾಹುತ ಘಟಿಸಿದೆ.

ಸಮುದಾಯ ಗಣಿಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದೆ. ದುರಂತ ಸ್ಥಳದಲ್ಲಿ ವಿಷಾನಿಲ ಸೋರಿಕೆ ನಿಂತಿದೆ ಎಂದು ತಿಳಿದು ಬಂದಿದೆ. ರಕ್ಷಣಾ ಪಡೆಗಳು ಬದುಕುಳಿದ ಜನರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.