ವಾಷಿಂಗ್ಟನ್: ಕಾಮಿಡಿ ಜಗತ್ತಿನ ಲೆಜೆಂಡ್ ಚಾರ್ಲಿ ಚಾಪ್ಲಿನ್ ಪುತ್ರಿ ಹಾಗೂ ನಟಿ ಜೋಸೆ ಫೀನ್ (74) ಪ್ಯಾರಿಸ್‌ನಲ್ಲಿ ನಿಧನ ಹೊಂದಿದ್ದಾರೆ.
ಜೋಸೆಫೀನ್, ಪಿಯರ್ ಪಾವೊಲೊ ಪಸೊಲಿನಿಯ, ದಿ ಕ್ಯಾಂಟರ್ಬರಿ ಟೇಲ್ಸ್ ಸೇರಿದಂತೆ ಹಲವಾರು ಹಾಲಿವುಡ್ ಚಲನಚಿತ್ರ ಗಳಲ್ಲಿ ನಟಿಸಿದ್ದರು.
ಜೋಸೆಫೀನ್ ಚಾಪ್ಲಿನ್ ಹಾಸ್ಯ ಜಗತ್ತಿನ ದಂತಕಥೆ ಚಾರ್ಲಿ ಚಾಪ್ಲಿನ್ ಅವರಿಗೆ ಒಟ್ಟು 11 ಮಕ್ಕಳಿದ್ದು ಅದರಲ್ಲಿ ಜೋಸೆಫೀನ್ 6ನೇಯವರು. ಚಾರ್ಲಿ ಚಾಪ್ಲಿನ್ ಅವರ ನಾಲ್ಕನೇ ಹೆಂಡತಿ, ನೊಬೆಲ್ ಪ್ರಶಸ್ತಿ ವಿಜೇತ ನಾಟಕಕಾರ ಯುಜೀನ್ ಓ’ನೀಲ್ ಅವರ ಮಗಳಾಗಿ ದ್ದರು. ಓ’ನೀಲ್ ಅವರ ಎಂಟು ಮಕ್ಕಳ ಪೈಕಿ ಜೋಸೆಫೀನ್ ಮೂರನೆಯವರು.
ಚಾಪ್ಲಿನ್ 1942 ರಲ್ಲಿ ಓ’ನೀಲ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಬಳಿಕ ಇಬ್ಬರ ನಡುವೆ ಸ್ನೇಹ ಆರಂಭವಾಗಿ ಪ್ರೀತಿಗೆ ತಿರುಗಿತ್ತು. 1943ರಲ್ಲಿ ಚಾಪ್ಲಿನ್ ಓ’ನೀಲ್ ಅವರೊಂದಿಗೆ ಸಪ್ತಪದ ತುಳಿದರು. ನಂತರ 1949ರಲ್ಲಿ ಜೋಸೆಫೀನ್ ಚಾಪ್ಲಿನ್ ಕ್ಯಾಲಿ ಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಜನಿಸಿದರು.
ಜೋಸೆಫೀನ್ ಚಾಪ್ಲಿನ್ ನಟಿಯಾಗಿ, ಎಸ್ಕೇಪ್ ಟು ದಿ ಸನ್, ವಿಟ್ಟೋರಿಯೊ ಡಿ ಸಿಕಾ, ಲೋಡೆರ್ ಡೆಸ್ ಫೌವ್ಸ್ ಮತ್ತು ಜರ್ಮನ್ ಭಾಷೆಯ ಜ್ಯಾಕ್ ದಿ ರಿಪ್ಪರ್ ಮಾರಿಸ್ ರೋನೆಟ್ ಮತ್ತು ಡೇನಿಯಲ್ ಪೆಟ್ರಿ ಅವರ ದಿ ಬೇ ಬಾಯ್‌ನಲ್ಲಿ ನಟಿಸಿದ್ದರು. ಜೋಸೆ ಫೀನ್ ಮೂರು ವರ್ಷದವರಿದ್ದಾಗಲೇ ಬಣ್ಣಹಚ್ಚಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು.
ಇವರ ತಂದೆ ಚಾರ್ಲಿ ಚಾಪ್ಲಿನ್ ಕೂಡ ತಮ್ಮ ಹಾಸ್ಯಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದರೂ, ಅವರು ಅನೇಕ ಚಲನಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದರು.